HEALTH TIPS

ಭಡ್ತಿಯಲ್ಲಿ ಎಸ್‌ಸಿ/ಎಸ್‌ಟಿಗೆ ಮೀಸಲಾತಿ:ತೀರ್ಪು ಕಾದಿರಿಸಿದ ಸುಪ್ರೀಂಕೋರ್ಟ್

               ನವದೆಹಲಿಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ)ಗಳಿಗೆ ಸರಕಾರಿ ಉದ್ಯೋಗಗಳಲ್ಲಿನ ಭಡ್ತಿಯಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ ಕಾದಿರಿಸಿದೆ.

             ಅಟಾರ್ನಿಜನರಲ್ ಕೆ.ಕೆ. ವೇಣುಗೋಪಾಲ್, ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಬಲಬೀರ್‌ಸಿಂಗ್ ಹಾಗೂ ವಿವಿಧ ರಾಜ್ಯಗಳ ಪರವಾಗಿ ಹಾಜರಾದ ಇತರ ಹಿರಿಯ ನ್ಯಾಯವಾದಿಗಳ ಅಹವಾಲುಗಳ ವಿಚಾರಣೆಯನ್ನು ನ್ಯಾಯಮೂರ್ತಿ ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠವು ಮಂಗಳವಾರ ನಡೆಸಿತು.

            ಸ್ವಾತಂತ್ರ ದೊರೆತು 75 ವರ್ಷಗಳು ಕಳೆದ ಬಳಿಕವೂ ಎಸ್‌ಸಿಗಳು ಹಾಗೂ ಎಸ್‌ಟಿ ಸಮುದಾಯಗಳನ್ನು ಮುಂದುವರಿದ ವರ್ಗಗಳ ಮಟ್ಟಕ್ಕೆ ಮುಂದಕ್ಕೆ ತರಲು ಸಾಧ್ಯವಾಗಿಲ್ಲವೆಂಬುದು ವಾಸ್ತವವೆಂದು ಕೇಂದ್ರ ಸರಕಾರವು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಬಿ.ಆರ್.ಗವಾಯಿ ಅವರನ್ನು ಕೂಡಾ ಒಳಗೊಂಡಿರುವ ನ್ಯಾಯಪೀಠಕ್ಕೆ ತಿಳಿಸಿತು.

           ಎಸ್‌ಸಿ ಹಾಗೂ ಎಸ್‌ಟಿ ಪಂಗಡಗಳಿಗೆ ಸೇರಿದವರಿಗೆ ಎ ಶ್ರೇಣಿ ಸರಕಾರಿ ಉದ್ಯೋಗಗಳಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಈಗಲೂ ಹೆಚ್ಚು ಕಷ್ಟಕರವಾಗುತ್ತಿದೆ ಹಾಗೂ ಖಾಲಿ ಬಿದ್ದಿರುವ ಹುದ್ದೆಗಳನ್ನು ತುಂಬಲು ಎಸ್‌ಸಿ, ಎಸ್‌ಟಿ ಹಾಗೂ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಕೆಲವು ದೃಢವಾ ತಳಹದಿಯನ್ನು ರೂಪಿಸಬೇಕೆಂದು ಅಟಾರ್ನಿ ಜನರಲ್ ವೇಣುಗೋಪಾಲ್ ಆಗ್ರಹಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries