ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಖಾಲಿ ಇರುವ ವಿವಿಧ ಅಧ್ಯಾಪಕ ಹುದ್ದೆಗಳಿಗೆ ದಿನ ವೇತನ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿ ನಡೆಸಲಾಗುವುದು. ಎಚ್.ಎಸ್.ಟಿ. ಹಿಂದಿ- 1, ಎಚ್.ಎಸ್.ಟಿ. ಫಿಸಿಕಲ್ ಸಯನ್ಸ್ ಮಲಯಾಳ 1, ಎಚ್.ಎಸ್.ಟಿ ಫಿಸಿಕಲ್ ಸಯನ್ಸ್ ಕನ್ನಡ 1, ಎಚ್.ಎಸ್.ಟಿ ಗಣಿತ ಮಲಯಾಳ 1, ಎಚ್.ಎಸ್.ಟಿ ಕನ್ನಡ 1, ಎಚ್.ಎಸ್. ಟಿ ಇಂಗ್ಲೀಷ್ 1, ಡ್ರಾಯಿಂಗ್ ಟೀಚರ್ 1, ಯು.ಪಿ.ಎಸ್.ಟಿ ಮಲಯಾಳ 3, ಯು.ಪಿ.ಎಸ್.ಟಿ ಹಿಂದಿ 1, ಎಲ್.ಪಿ.ಎಸ್.ಟಿ ಅರೆಬಿಕ್ 1, ಎಚ್.ಎಸ್.ಟಿ. ನೇಚುರಲ್ ಸಯನ್ಸ್ ಕನ್ನಡ ಹುದ್ದೆಗಳಿಗೆ ದಿನವೇತನ ಆಧಾರದ ನೇಮಕಾತಿ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ಅರ್ಹತಾ ಪತ್ರಗಳೊಂದಿಗೆ ಅ.29 ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ಶಾಲಾ ಕಛೇರಿಯಲ್ಲಿ ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬೇಕಾಗಿ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9995992949 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.