ಕೊಚ್ಚಿ: ಮಾವನ ಆಸ್ತಿಯಲ್ಲಿ ಅಳಿಯ ಯಾವುದೇ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ನ್ಯಾಯಾಧೀಶರಾದ ಎನ್. ಅನಿಲ್‍ಕುಮಾರ್ ಅವರು ಪತ್ನಿಯ ತಂದೆಯ ಆಸ್ತಿಗೆ ಅರ್ಹರಲ್ಲ ಎಂದು ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಕಣ್ಣೂರು ನಿವಾಸಿ ಸಲ್ಲಿಸಿದ ಮೇಲ್ಮನವಿಯ ಮೇಲೆ ಆದೇಶ ಹೊರಡಿಸಿದರು.
ಮಾವ ಹೆನ್ರಿ ಥಾಮಸ್ ತನ್ನ ಅಳಿಯ ಡೇವಿಡ್ ರಾಫೆಲ್ ಗೆ ತನ್ನ ಮಾಲೀಕತ್ವದ ಆವರಣಕ್ಕೆ ಪ್ರವೇಶಿಸದಂತೆ ತಡೆಯಾಜ್ಞೆ ನೀಡುವಂತೆ ಕೋರಿ ಪಯ್ಯನ್ನೂರು ಉಪ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಅಳಿಯ ಡೇವಿಡ್ ತಾನು ಹೆನ್ರಿಯ ಏಕೈಕ ಪುತ್ರಿಯನ್ನು ಮದುವೆಯಾಗಿದ್ದೇನೆ ಮತ್ತು ಮದುವೆಯಿಂದ ತನ್ನನ್ನು ಅವರು ದತ್ತು ತೆಗೆದುಕೊಂಡಂತೆ ಎಂದು ನ್ಯಾಯಾಲಯಕ್ಕೆ ಹೇಳಿದ್ದÀನು. ಆದ್ದರಿಂದ, ಅಳಿಯನಿಗೆ ಮನೆಯಲ್ಲಿ ಉಳಿಯುವ ಹಕ್ಕಿದೆ ಎಂದು ವಾದಿಸಲಾಯಿತು.
ಆದರೆ ಫಾ. ಜೇಮ್ಸ್ ನಜರೆತ್ ಎಂಬವರು ಈ ಭೂಮಿಯನ್ನು ತನಗೆ ಉಡುಗೊರೆಯಾಗಿ ನೀಡಿದ್ದರು. ಬಳಿಕ ತನ್ನ ಸ್ವಂತ ಹಣದಿಂದ ಒಂದು ಮನೆಯನ್ನು ನಿರ್ಮಿಸಿರುವುದಾಗಿ ಹೆನ್ರಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಕುಟುಂಬದೊಂದಿಗೆ ವಾಸಿಸುವ ಮನೆ ಇದಾಗಿದೆ. ಇದಕ್ಕೆ ಅಳಿಯನಿಗೆ ಯಾವುದೇ ಹಕ್ಕಿಲ್ಲ ಎಂದು ಹೆನ್ರಿ ಗಮನಸೆಳೆದರು.
ನಂತರ ವಿಚಾರಣಾ ನ್ಯಾಯಾಲಯವು ಅಳಿಯನ ವಾದಗಳನ್ನು ತಳ್ಳಿಹಾಕಿತು. ಇದನ್ನು ಪ್ರಶ್ನಿಸಿ ಡೇವಿಡ್ ಹೈಕೋರ್ಟ್ ಮೊರೆ ಹೋದರು. ಆದರೆ, ಅಳಿಯನನ್ನು ಕುಟುಂಬದ ಸದಸ್ಯರಂತೆ ಪರಿಗಣಿಸುವಲ್ಲಿ ಸಮಸ್ಯೆಗಳಿವೆ ಎಂದು ಹೈಕೋರ್ಟ್ ತೀರ್ಪು ನೀಡಿತು. ಮದುವೆಯಿಂದ ಮನೆಯಲ್ಲಿ ದತ್ತು ಪಡೆಯುತ್ತಿದ್ದೇನೆ ಎಂದು ಅಳಿಯ ಹೇಳುವುದು ನಾಚಿಕೆಗೇಡು ಎಂದು ನ್ಯಾಯಾಲಯ ಹೇಳಿದೆ.