ತಿರುವನಂತಪುರಂ: ನಿರಂತರವಾದ ಧಾರಾಕಾರ ಮಳೆಯಿಂದಾಗಿ ಹಲವು ರಾಜ್ಯಗಳ ಜನರ ಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ, ಕೇರಳದಲ್ಲಿ ಕಳೆದೆರಡು ದಿನಗಳಿಂದ ಧೋ ಎಂದು ಸುರಿಯುತ್ತಿರುವ ಮಳೆಗೆ ಜಲಪ್ರವಾಹಗಳು, ಭೂಕುಸಿತಗಳು ಪರಿಣಮಿಸಿ, ಜನರು ಪ್ರಾಣ ಮತ್ತು ಆಸ್ತಿಪಾಸ್ತಿಗಳನ್ನೂ ಕಳೆದುಕೊಳ್ಳುತ್ತಿದ್ದಾರೆ.
ಕೇರಳ ರಾಜ್ಯದ ಕೊಟ್ಟಾಯಂನ ಮುಂಡಕಾಯಂನಲ್ಲಿ ಭಾನುವಾರದಂದು ನದಿಯಂಚಿನ ದೊಡ್ಡ ಮನೆಯೊಂದು ನೋಡನೋಡುತ್ತಿದ್ದಂತೆಯೇ ಕುಸಿದು ನೀರಿನಲ್ಲಿ ಹರಿದುಹೋಗಿದೆ. ಹೀಗೆ ಮನೆಯು ಭೂಮಿಯಿಂದ ಕಳಚಿಕೊಂಡು ನೀರು ಪಾಲಾಗುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.