ಕುಂಬಳೆ: ವಿಶ್ವ ಸ್ತನ ಕ್ಯಾನ್ಸರ್ ಮಾಸಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಉದ್ಘಾಟನೆ ಮತ್ತು ವಿಚಾರಸಂಕಿರಣ ಕುಂಬಳೆಯಲ್ಲಿ ಜರಗಿತು. ಜಿಲ್ಲಾ ವೈದ್ಯಾದಿಕಾರಿ(ಆರೋಗ್ಯ) , ರಾಷ್ಟ್ರೀಯ ಆರೋಗ್ಯ ದೌತ್ಯ, ಕುಂಬಳೆ ಸಮಾಜ ಆರೋಗ್ಯ ಕೇಂದ್ರ ಜಂಟಿ ವತಿಯಿಂದ ಕಾರ್ಯಕ್ರಮ ಜರುಗಿತು.
ಕಾಸರಗೊಡು ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಿ.ಎ.ಸೈಮಾ ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ಜ್ಯೂನಿಯರ್ ಅಡ್ಮಿನಿಸ್ಟ್ರೇಟಿವ್ ವೈದ್ಯಾಧಿಕಾರಿ ಡಾ.ನಿರ್ಮಲ್ ಪ್ರಧಾನ ಭಾಷಣ ಮಾಡಿದರು. ಪರಿಣತರು ತರಗತಿ ನಡೆಸಿದರು.