ಕಾಸರಗೋಡು: 19 ತಿಂಗಳ ನಂತರ ಸಾರ್ವಜನಿಕ ಶಿಕ್ಷಣಾಲಯಗಳು ನ.1ರಂದು ಮರಳಿ ಆರಂಭಗೊಳ್ಳುತ್ತಿರುವ ವೇಳೆ ಎಲ್ಲರ ಸಹಕಾರ ಈ ನಿಟ್ಟಿನಲ್ಲಿ ಅಗತ್ಯವಿದೆ ಎಂದು ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ ಆಗ್ರಹಿಸಿದರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಈ ನಿಟ್ಟಿನಲ್ಲಿ ಮುಂಜಾಗರೂಕತೆಯೊಂದಿಗಿನ ಕ್ರಮ ನಡೆದುಬರುತ್ತಿದೆ. ಮಕ್ಕಳನ್ನು ಕೋವಿಡ್ 19 ರೋಗ ಭೀತಿಯಿಂದ ಸಂರಕ್ಷಿಸುವ ಹೊಣೆ ನಮ್ಮೆಲ್ಲರದು. ಅದನ್ನು ದಕ್ಷತೆಯಿಂದ ನಿರ್ವಹಿಸುವಲ್ಲಿ ಶಿಕ್ಷಕರು, ಹೆತ್ತವರು, ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಒಗ್ಗಟ್ಟಿನಿಂದ ಯತ್ನಿಸಬೇಕು ಎಂದವರು ತಿಳಿಸಿದರು.
ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ವಿವಿಧ ಹಂತಗಳಲ್ಲಿ ಈ ಸಂಬಂಧ ಚಟುವಟಿಕೆಗಳು ನಡೆದುಬರುತ್ತಿವೆ. ರಾಜ್ಯಸರಕಾರದ ಮಾರ್ಗಸೂಚಿ ಮತ್ತು ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಸಾರ್ವಜನಿಕ ಶಿಕ್ಷಣವನ್ನು ಸುಗಮಗೊಳಿಸಬೇಕಾಗಿದೆ ಎಂದವರು ನುಡಿದರು.