ಕಾಸರಗೋಡು: ರಾಷ್ಟ್ರೀಯ ಸೇವಾ ಭಾರತಿ ಅಂಗೀಕೃತ ಸಂಸ್ಥೆ ದೀನಬಂಧು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುತ್ತಿರುವ 'ಬಿಸಿಊಟ' ಹಾಗೂ ಇನ್ನಿತರ ಸೇವಾ ಚಟುವಟಿಕೆಗಳ ಅಗತ್ಯಕ್ಕಾಗಿ ನೂತನವಾಗಿ ನಿರ್ಮಿಸುತ್ತಿರುವ ಸೇವಾ ಕುಟೀರದ ಯಶಸ್ವಿಗಾಗಿ ಹಾಗೂ ಸೇವಾ ಕಾರ್ಯದ ವಿಸ್ತಾರಕ್ಕಾಗಿ ಹಮ್ಮಿಕೊಂಡಿರುವ 'ಮನೆ ಮನೆ ಭಜನೆ' ಅಕ್ಟೋಬರ್ 30 ರಂದು ಶನಿವಾರ ಸಂಜೆ 7ರಿಂದ ಕೂಡ್ಲು ರಾಮದಾಸ ನಗರದ ಕಾಳ್ಯಂಗಾಡಿನ ಕೆ.ಜಗದೀಶ ಕೂಡ್ಲು ಅವರ ಮನೆ 'ಆಶಾ ಕಿರಣ' ದಲ್ಲಿ ನಡೆಯಲಿದೆ. ಈ ಸೇವಾ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.