ಕಾಸರಗೋಡು: ಅಜಾನೂರು ಗ್ರಾಮ ಪಂಚಾಯಿತಿಯ 4ನೇ ವಾರ್ಡು ಮಡಿಯನ್ ಕುಳೀಕ್ಕಾಡ್ ಗದ್ದೆಯಲ್ಲಿ ಮಧುರಿಮಾ, ಸೂರ್ಯಕಾಂತಿ, ಜಯ, ನಮ್ಮಾ, ಮಹಿಮಾ ಎಂಬ ಐದು ಜಿ.ಎಲ್.ಜಿ ತಂಡಗಳ ನೇತೃತ್ವದಲ್ಲಿ ಸುಮಾರು 8 ಎಕ್ರೆ ಜಾಗದಲ್ಲಿ ನಡೆಸಲಾಗಿದ್ದ ಭತ್ತದ ಕೃಷಿಯ ಕೊಯ್ಲು ನಡೆಸಲಾಯಿತು.
ಸ್ಥಳೀಯ ತಳಿಗಳಾದ ಜಯ, ಜ್ಯೋತಿ, ಉಮಾ ಸಹಿತ ವಿವಿಧ ತಳಿಗಳನ್ನು ನಾಟಿ ಮಾಡಲಾಗಿತ್ತು. ಅಜಾನೂರು ಗ್ರಾಮ ಪಂಚಾಯಿತಿ ಕೃಷಿಭವನ, ಕುಟುಂಬಶ್ರೀ ಗಳ ಸಹಕಾರದೊಂದಿಗೆ ಇಲ್ಲಿ ಕೃಷಿ ನಡೆಸಲಾಗಿತ್ತು.
ಕೊಯ್ಲಿಗೆ ಅಜಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಶೋಭಾ ಚಾಲನೆ ನೀಡಿದರು. ಜೆ.ಎಲ್.ಜಿ. ಕಾರ್ಯದರ್ಶಿ ಇಂದಿರಾ ಎಂ. ಅಧ್ಯಕ್ಷತೆ ವಹಿಸಿದ್ದರು. ವಾರ್ಡು ಸದಸ್ಯೆ ಸಿ.ಕುಞËಮಿನಾ, ಸಿ.ಡಿ.ಎಸ್.ಅಧ್ಯಕ್ಷೆ ಎಂ.ವಿ.ರತ್ನಾ, ಕುಟುಂಬಶ್ರೀ ಜಿಲ್ಲಾ ಮಿಷನ್ ಬ್ಲೋಕ್ ಸಂಚಾಲಕಿ ಎ.ರಜನಿ, ಮಡಿಯನ್ ಕುಳೀಕ್ಕಾಡ್ ಗದ್ದೆ ಸಮಿತಿ ಕಾರ್ಯದರ್ಶಿ ಪವಿತ್ರನ್ ಎ.ವಿ., ಸಿ.ಡಿ.ಎಸ್. ಸದಸ್ಯೆ ಪಿ.ಗೀತಾ ಉಪಸ್ಥಿತರಿದ್ದರು.