HEALTH TIPS

ಈ ವಾರ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ, ಸೇವೆಯಲ್ಲಿ ವ್ಯತ್ಯಯ

              ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಬ್ಯಾಂಕ್‌ಗಳ ರಜಾದಿನಗಳ ಪಟ್ಟಿ ಪ್ರಕಾರ ಈ ತಿಂಗಳಲ್ಲಿ ಒಟ್ಟು 21 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

             ಅದರಲ್ಲಿ ಈ ವಾರ 7 ದಿನಗಳಲ್ಲಿ 6 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂದು ಹೇಳಿದೆ. ಅಕ್ಟೋಬರ್ ತಿಂಗಳಲ್ಲಿ ಈಗಾಗಲೇ ಗಾಂಧಿ ಜಯಂತಿ ರಜೆ ಮುಗಿದಿದ್ದು, ಮುಂದೆ ವಿಜಯ ದಶಮಿ, ಈದ್ ಮಿಲಾದ್, ವಾಲ್ಮೀಕಿ ಜಯಂತಿ ಸೇರಿದಂತೆ ಹಲವು ಸರ್ಕಾರಿ ರಜೆಗಳಿವೆ. ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್​ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್​ಗಳಿಗೆ ಅನ್ವಯವಾಗಲಿವೆ.

            ಈ ಅಕ್ಟೋಬರ್​ ತಿಂಗಳಿನಲ್ಲಿ 14 ದಿನಗಳು ಬ್ಯಾಂಕ್​ಗಳಿಗೆ ರಜೆ ಇದೆ ಎಂದು ಆರ್​​ಬಿಐ ಹೇಳಿದೆ. ಇನ್ನುಳಿದ 7 ರಜಾದಿನಗಳಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿವೆ.

          ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ ಮತ್ತು ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಅಕೌಂಟ್ಸ್​ ಕ್ಲೋಸಿಂಗ್.

             ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್​ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್​ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್​ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್​ ಮತ್ತು ಇಂಟರ್​ನೆಟ್​​​​​​​​ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಗಮನಿಸಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ, ಏಕೆಂದರೆ ಇದನ್ನು ಆರ್‌ಬಿಐ ಕಡ್ಡಾಯಗೊಳಿಸಿದೆ. ಒಟ್ಟಾರೆಯಾಗಿ, ಬ್ಯಾಂಕುಗಳು ಅಕ್ಟೋಬರ್ ತಿಂಗಳಲ್ಲಿ ಸುಮಾರು 21 ರಜಾದಿನಗಳನ್ನು ನಿರೀಕ್ಷಿಸಬಹುದು.

   ಅಕ್ಟೋಬರ್ 12: ದುರ್ಗಾ ಪೂಜಾ(ಮಹಾ ಸಪ್ತಮಿ)ಅಗರ್ತಲಾ, ಕೋಲ್ಕತಾ)

ಅಕ್ಟೋಬರ್ 13: ದುರ್ಗಾ ಪೂಜಾ(ಮಹಾ ಸಪ್ತಮಿ)(ಅಗರ್ತಲಾ, ಭುವನೇಶ್ವರ, ಗ್ಯಾಂಗ್ಟಾಕ್, ಗುವಾಹಟಿ, ಇಂಫಾಲ್, ಕೋಲ್ಕತಾ, ಪಾಟ್ನಾ, ರಾಂಚಿ)

ಅಕ್ಟೋಬರ್ 14: ದುರ್ಗಾ ಪೂಜಾ/ದಸರಾ/ಮಹಾ ನವಮಿ/ಆಯುಧಾ ಪೂಜಾ(ಅಗರ್ತಲಾ, ಬೆಂಗಳೂರು, ಚೆನ್ನೈ, ಗ್ಯಾಂಗ್ಟಾಕ್, ಗುವಾಹಟಿ, ಕಾನ್ಪುರ, ಕೊಚ್ಚಿ, ಕೋಲ್ಕತಾ, ಲಕ್ನೋ, ಪಾಟ್ನಾ, ರಾಂಚಿ, ಶಿಲ್ಲಾಂಗ್, ಶ್ರೀನಗರ, ತಿರುವನಂತಪುರಂ)

ಅಕ್ಟೋಬರ್ 15: ದುರ್ಗಾ ಪೂಜಾ/ದಸರಾ/ ವಿಜಯ ದಶಮಿ(ಇಂಫಾಲ್ ಮತ್ತು ಶಿಮ್ಲಾ ಹೊರತುಪಡಿಸಿ ಎಲ್ಲಾ ಬ್ಯಾಂಕುಗಳು)

ಅಕ್ಟೋಬರ್ 16: ದುರ್ಗಾ ಪೂಜೆ (ದಾಸೈನ್) / (ಗ್ಯಾಂಗ್ಟಾಕ್)

ಅಕ್ಟೋಬರ್ 17: ಭಾನುವಾರ

ಅಕ್ಟೋಬರ್ 18: ಕಟಿ ಬಿಹು(ಗುವಾಹಟಿ)

ಅಕ್ಟೋಬರ್ 19: ಈದ್ ಇ ಮಿಲಾದ್(ಅಹಮದಾಬಾದ್, ಬೇಲಾಪುರ, ಭೋಪಾಲ್, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ಇಂಫಾಲ್, ಜಮ್ಮು, ಕಾನ್ಪುರ, ಕೊಚ್ಚಿ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್‌ಪುರ್, ರಾಂಚಿ, ಶ್ರೀನಗರ, ತಿರುವನಂತಪುರಂ)

ಅಕ್ಟೋಬರ್ 20: ವಾಲ್ಮೀಕಿ ಜಯಂತಿ, ಲಕ್ಷ್ಮೀ ಪೂಜೆ(ಅಗರ್ತಲಾ, ಬೆಂಗಳೂರು, ಚಂಡೀಘಡ, ಕೋಲ್ಕತಾ, ಶಿಮ್ಲಾ)

ಅಕ್ಟೋಬರ್ 22: ಈದ್-ಇ-ಮಿಲಾದ್-ಉಲ್-ನಬಿ (ಜಮ್ಮು, ಶ್ರೀನಗರ)

ಅಕ್ಟೋಬರ್ 23: ನಾಲ್ಕನೇ ಶನಿವಾರ

ಅಕ್ಟೋಬರ್ 24: ಭಾನುವಾರ

ಅಕ್ಟೋಬರ್ 26: ಆಯಕ್ಸೆಶನ್ ಡೇ(ಜಮ್ಮು & ಕಾಶ್ಮೀರ)

ಅಕ್ಟೋಬರ್ 31:ಭಾನುವಾರ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries