ಪೆರ್ಲ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಅಂಗವಾಗಿ ನಡೆದುಬರುತ್ತಿರುವ ವಿವಿಧ ಸೇವಾ ಯೋಜನೆಗಳ ಅಂಗವಾಗಿ ಬಿಜೆಪಿ ಎಣ್ಮಕಜೆ ಪಂಚಾಯಿತಿ 15ನೇ ವಾರ್ಡು ಬಜಕೂಡ್ಲು ದೇವಸ್ಥಾನ ವಠಾರದಲ್ಲಿ ಸಸಿಗಳ ವಿತರಣೆ ಹಾಗೂ ಬಾಲ ಪ್ರತಿಭೆಗಳಿಗೆ ಅಭಿನಂದನೆ ಕಾರ್ಐಕ್ರಮ ಜರುಗಿತು.
'ಸೇವಾ ಹಿ ಸಮರ್ಪಣ್' ಕಾರ್ಯಕ್ರಮದ ಅಂಗವಾಗಿ 700ಕ್ಕೂ ಹೆಚ್ಚು ಅಡಕೆ ಸಸಿಗಳನ್ನು ಕೃಷಿಕರಿಗೆ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯೆ ಉಷಾಗಣೇಶ್ ಸಮಾರಂಭ ಉದ್ಘಾಟಿಸಿದರು. ಹಿರಿಯ ಮುಖಂಡ ಸದಾಶಿವ ಭಟ್ ಹರಿನಿಲಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ, ಮಾಜಿ ಅಧ್ಯಕ್ಷೆ ರೂಪವಾಣಿ ಆರ್.ಭಟ್, ಕೃಷಿಕ ಸಂಕಪ್ಪ ರೈ ಬಜಕೂಡ್ಲು, ಶಿಕ್ಷಕ, ಪುರೋಹಿತ ಪ್ರವೀಣ್ ಅಡಿಗ ಬಜಕೂಡ್ಲು, ಸಂಜಯ್ ಸ್ವರ್ಗ, ಗ್ರಾಪಂ ಮಾಜಿ ಸದಸ್ಯ ಉದಯ ಚೆಟ್ಟಿಯಾರ್ ಉಪಸ್ಥಿತರಿದ್ದರು. ಈ ಸಂದರ್ಭ ಸಂಸ್ಕøತ ವಾರ್ತಾ ವಾಚನ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದ ದಿಶಾ ಬಜಕೂಡ್ಲು ಹಾಗೂ ಸಂಸ್ಕ್ರತ ಏಕಪಾತ್ರಾಭಿನಯದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ತೃತೀಯ ಬಹುಮಾನ ಗಳಿಸಿದ ವಿಸ್ಮಿತಾ ಬಜಕೂಡ್ಲು ಅವರನ್ನು ಅಭಿನಂದಿಸಲಾಯಿತು. ಸುಜಿ ಬಜಕೂಡ್ಲು ವಂದಿಸಿದರು. 'ಸೇವಾ ಹಿ ಸಮರ್ಪಣ್' ಅಂಗವಾಗಿ ಪಂಚಾಯಿತಿಯಾದ್ಯಂತ ಅಡಕೆ ಸಸಿಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.