ತಿರುವನಂತಪುರಂ: ಮುಂದಿನ ತಿಂಗಳು ರಾಜ್ಯದಲ್ಲಿ ಶಾಲೆ ಆರಂಭವಾಗಲಿದ್ದು, ಮಾರ್ಗಸೂಚಿ ಸಿದ್ಧವಾಗಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಜಂಟಿಯಾಗಿ ಮಾರ್ಗಸೂಚಿ ಸಿದ್ಧಪಡಿಸಿವೆ. ಅದನ್ನು ಶೀಘ್ರವೇ ಮುಖ್ಯಮಂತ್ರಿಗೆ ಹಸ್ತಾಂತರಿಸಲಾಗುವುದು. ಅಂತಿಮ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗುತ್ತದೆ.
ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದು ಮಾರ್ಗಸೂಚಿ ಮುಖ್ಯವಾಗಿ ಹೇಳುತ್ತದೆ. ಇದರ ಭಾಗವಾಗಿ, ಬೆಂಚ್ ಒಂದರಲ್ಲಿ ಒಬ್ಬ ವಿದ್ಯಾರ್ಥಿಯನ್ನು ಮಾತ್ರ ಕುಳ್ಳಿರುವಂತೆ ಎಲ್ಪಿ ಮಟ್ಟದಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ. ಒಂದು ದಿನ ಒಂದು ತರಗತಿಯಲ್ಲಿ ಕೇವಲ 10 ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುವುದು. ಯುಪಿ ಮಟ್ಟದಿಂದ ಒಂದು ಬೆಂಚ್ ಲ್ಲಿ ಇಬ್ಬರು ಮಕ್ಕಳನ್ನು ಕೂರಿಸಬಹುದು. ಒಂದು ತರಗತಿಯಲ್ಲಿ ಕೇವಲ 20 ಮಕ್ಕಳನ್ನು ಕೂರಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಶಾಲಾ ಆರಂಭದ ಮೊದಲ ಹಂತದಲ್ಲಿ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಇರುವುದಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಅವಲೋಕನಗ್ಯೆದು ಒಂದು ವಾರದ ನಂತರ, ಊಟದ ವ್ಯವಸ್ಥೆ ಪರಿಗಣಿಸಲಾಗುತ್ತದೆ. ಮಧ್ಯಾಹ್ನದವರೆಗೆ ತರಗತಿಗಳು ನಡೆಯುತ್ತವೆ. ಬ್ಯಾಚ್ ಬ್ಯಾಕ್ ತರಗತಿಗಳು ನಡೆಯಲಿವೆ. ಒಂದಕ್ಕಿಂತ ಹೆಚ್ಚು ವರ್ಗದ(ಡಿವಿಷನ್) ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳು ತಮ್ಮದೇ ನಿಬಂಧನೆಗಳ ಬ್ಯಾಚ್‌ಗಳನ್ನು ರೂಪೀಕರಿಸಬಹುದಾಗಿದೆ.