HEALTH TIPS

ರಿಯಲ್ ಎಸ್ಟೇಟ್ ಬಿಲ್ಡರ್-ಖರೀದಿದಾರರ ನಡುವೆ ಮಾದರಿ ಒಪ್ಪಂದ ಬೇಕು: 'ಸುಪ್ರೀಂ'

             ನವದೆಹಲಿ: 'ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೇಶವು ಗ್ರಾಹಕರ ಹಿತರಕ್ಷಣೆಗಾಗಿ ಬಿಲ್ಡರ್-ಖರೀದಿದಾರರ ನಡುವೆ ಮಾದರಿ ಒಪ್ಪಂದ ಜಾರಿಗೆ ತರುವ ಅಗತ್ಯವಿದೆ' ಎಂದು ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ.

         ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ಪೀಠವು ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

          'ಬಿಲ್ಡರ್‌ಗಳು ಒಪ್ಪಂದದಲ್ಲಿ ಷರತ್ತುಗಳನ್ನು ವಿಧಿಸಲು ಪ್ರಯತ್ನಿಸುತ್ತಿರುತ್ತಾರೆ, ಅದು ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಒಪ್ಪಂದದಲ್ಲಿ ಸ್ವಲ್ಪ ಏಕರೂಪತೆ ಇರಬೇಕು. ಗ್ರಾಹಕರ ರಕ್ಷಣೆಗಾಗಿ ಬಿಲ್ಡರ್- ಖರೀದಿದಾರರ ಮಾದರಿ ಒಪ್ಪಂದವನ್ನು ದೇಶದಲ್ಲಿ ಜಾರಿಗೆ ತರುವುದು ಮುಖ್ಯ' ಎಂದು ಪೀಠ ಹೇಳಿದೆ.

              ಅರ್ಜಿದಾರರಾದ ವಕೀಲ ಅಶ್ವಿನಿ ಉಪಾಧ್ಯಾಯರ ಪರ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್, ಮಾದರಿ ಒಪ್ಪಂದವು ಕೆಲವು ರಾಜ್ಯಗಳಲ್ಲಿ ಇದೆ ಮತ್ತು ಕೆಲವು ರಾಜ್ಯಗಳಲ್ಲಿ ಇಲ್ಲ. ಇದ್ದರೂ ಆ ಒಪ್ಪಂದಗಳಲ್ಲಿ ಯಾವುದೇ ಏಕರೂಪತೆ ಇಲ್ಲ. ಹಾಗಾಗಿ ಕೇಂದ್ರ ಸರ್ಕಾರವೇ ಸಿದ್ಧಪಡಿಸಿದ ಮಾದರಿ ಒಪ್ಪಂದದ ಅಗತ್ಯವಿದೆ ಎಂದು ವಾದಿಸಿದರು.

             ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ (ರೆರಾ) ಕಾಯ್ದೆ 2016 ರ ಪ್ರಕಾರ ಗ್ರಾಹಕರನ್ನು ರಕ್ಷಿಸಲು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಬಿಲ್ಡರ್‌ಗಳು ಮತ್ತು ಏಜೆಂಟ್, ಖರೀದಿದಾರರಿಗೆ ಮಾದರಿ ಒಪ್ಪಂದಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಉಪಾಧ್ಯಾಯ ಪಿಐಎಲ್ ಸಲ್ಲಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries