ಕೊಚ್ಚಿ: ಅತಿದೊಡ್ಡ ದೊಡ್ಡ ಬಜೆಟ್ ನ ಮಲಯಾಳಂ ಚಿತ್ರ 'ಮರಕ್ಕಾರ್: ದಿ ಲಯನ್ ಆಫ್ ಅರೇಬಿಯನ್ ಸೀ' ಶೀಘ್ರದಲ್ಲೇ ಬಿಡುಗಡೆಯಾಗುವುದಿಲ್ಲ ಎಂದು ನಿರ್ಮಾಪಕ ಆಂಟನಿ ಪೆರುಂಬಾವೂರ್ ಹೇಳಿದ್ದಾರೆ. ಈ ತಿಂಗಳ 25 ರಂದು ರಾಜ್ಯದಲ್ಲಿ ಚಿತ್ರಮಂದಿರಗಳನ್ನು ತೆರೆಯಲಾಗುವುದು ಎಂದು ಸರ್ಕಾರ ಘೋಷಿಸಿದೆ. ಆ ಬಳಿಕ ಆಂಟನಿ ಪೆರುಂಬಾವೂರ್ ಈ ಬಗ್ಗೆ ಮಾಹಿತಿ ನೀಡಿದರು. 50 ರಷ್ಟು ಸೀಟುಗಳಲ್ಲಿ ಮಾತ್ರ ವೀಕ್ಷಕರಿಗೆ ಅವಕಾಶ ನೀಡಲಾಗಿದೆ. ಆದಾಗ್ಯೂ, ಆಂಟನಿ ಪೆರುಂಬಾವೂರ್ ಅವರು ಚಿತ್ರ ನಷ್ಟಗೊಳ್ಳದಿರಲಿ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಹೆಚ್ಚುತ್ತಿರುವ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮೋಹನ್ ಲಾಲ್-ಪ್ರಿಯದರ್ಶನ್ ಜೋಡಿಯ ಈ ಚಿತ್ರವನ್ನು ಮುಂದೂಡಿತ್ತು. ಮೊದಲ 100 ಕೋಟಿ ಬಜೆಟ್ ಮಲಯಾಳಂ ಚಿತ್ರದ ಕೊನೆಯ ಘೋಷಣೆಯ ದಿನಾಂಕ ಆಗಸ್ಟ್ 12. ಥಿಯೇಟರ್ ಮಾಲೀಕರು ಕೇರಳ ಮತ್ತು ತಮಿಳುನಾಡಿನಲ್ಲಿ ಮೂರು ವಾರಗಳ ಉಚಿತ ಪ್ರದರ್ಶನದ ಭÀರವಸೆ ನೀಡಿದ್ದರು. ಆದರೆ ಕೊರೋನಾದಿಂದಾಗಿ ಬಿಡುಗಡೆಯು ಅನಿಶ್ಚಿತತೆ ವಿಸ್ತರಿಸಲ್ಪಟ್ಟಿದೆ.
ಸಂತೋಷ್ ಟಿ ಕುರುವಿಲ ಅವರ ಮೂನ್ ಲೈಟ್ ಎಂಟರ್‍ಟೈನ್‍ಮೆಂಟ್ ಮತ್ತು ಕಾನ್ಫಿಡೆಂಟ್ ಗ್ರೂಪ್ ಆಂಟನಿ ಪೆರುಂಬಾವೂರ್‍ನ ಆಶೀರ್ವಾದ್ ಸಿನಿಮಾಸ್ ಸಹಯೋಗದಲ್ಲಿ ಮರಕ್ಕಾರ್ ನ್ನು ನಿರ್ಮಿಸಿದೆ. ಚಿತ್ರದ ಚಿತ್ರೀಕರಣವನ್ನು ವಾಗಮನ್, ಹೈದರಾಬಾದ್, ಬದ್ಮಿ ಮತ್ತು ರಾಮೇಶ್ವರಂನಲ್ಲಿ ಮಾಡಲಾಗಿದೆ.
ಮಂಜು ವಾರಿಯರ್, ಪ್ರಭು, ಪ್ರಣವ್ ಮೋಹನ್ ಲಾಲ್, ಕಲ್ಯಾಣಿ ಪ್ರಿಯದರ್ಶನ್, ಫಾಲ್, ಅರ್ಜುನ್ ಸರ್ಜಾ, ಕೀರ್ತಿ ಸುರೇಶ್ ಮತ್ತು ಇನ್ನೂ ಅನೇಕರು ತಾರಾಗಣದಲ್ಲಿದ್ದಾರೆ. ತಿರುವನ್ ಚಿತ್ರದ ಛಾಯಾಗ್ರಾಹಕರು. ಕಲಾ ನಿರ್ದೇಶನ ಸಾಬು ಸಿರಿಲ್ ಅವರದ್ದು. ಮರಕ್ಕಾರ್: ಅರೇಬಿಯನ್ ಸೀ ಅತ್ಯುತ್ತಮ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.