ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ.ಕಿನ್ನಿಂಗಾರು ಬೆಳೇರಿಯ ಕೃಷಿಕ ಸತ್ಯನಾರಾಯಣ ಸುಮಾರು 200 ಅಪೂರ್ವ ಭತ್ತದ ತಳಿ ಸಹಿತ ವೈವಿಧ್ಯಮಯ ಬಣ್ಣ, ಗಾತ್ರ, ಔಷಧೀಯ ಗುಣ ವಿಶೇಷತೆಯ ಸುಮಾರು 650 ದೇಸಿ-ವಿದೇಶೀ ಭತ್ತದ ತಳಿ ಸಂಗ್ರಹಿಸಿ ಕೃತಕ ಗದ್ದೆಯಲ್ಲಿ ಬಿತ್ತನೆ ಮಾಡಿ ತಳಿ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದು ಅವರನ್ನು ಬಿಜೆಪಿ ನೇತೃತ್ವದಲ್ಲಿ ಮನೆಗೆ ತೆರಳಿ ಗೌರವಿಸಲಾಯಿತು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಶಾಲು ಹೊದೆಸಿ, ಹಣ್ಣು ಹಂಪಲು-ಸ್ಮರಣಿಕೆ ನೀಡಿ ಗೌರವಿಸಿದರು. ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿಆರ್, ಬೆಳ್ಳೂರು ಗ್ರಾ.ಪಂ.ಅಧ್ಯಕ್ಷ ಶ್ರೀಧರ ಎಂ., ಉಪಾಧ್ಯಕ್ಷೆ ಗೀತಾ ಕೆ., ಬಿಜೆಪಿ ಜನ ಪ್ರತಿನಿಧಿಗಳು, ಬಿಜೆಪಿ ಬೆಳ್ಳೂರು ಪಂಚಾಯಿತಿ ಸಮಿತಿ ಅಧ್ಯಕ್ಷ ಜಯಾನಂದ ಕುಳ, ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್ ನಾಕೂರು ಮತ್ತಿತರರು ಉಪಸ್ಥಿತರಿದ್ದರು.