ಕಾಸರಗೊಡು: ವಿಶ್ವ ಅಯೋಡಿನ್ ಕೊರತೆ ಪ್ರತಿರೋಧ ದಿನಾಚರಣೆ ಅಂಗವಾಗಿ ಜಿಲ್ಲಾ ವೈದ್ಯಾಧಿಕಾರಿ ಕಚೇರಿ(ಆರೋಗ್ಯ) , ರಾಷ್ಟ್ರೀಯ ಆರೋಗ್ಯ ದೌತ್ಯ ಜಂಟಿ ವತಿಯಿಂದ ಆರ್.ಬಿ.ಎಸ್.ಕೆ. ದಾದಿಯರಿಗಾಗಿ ವೆಬಿನಾರ್ ಜರುಗಿತು. ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ನೆರವೇರಿಸಿದರು. ಪನತ್ತಡಿ ತಾಲೂಕು ಆಸ್ಪತ್ರೆಯ ಡಯಟೀಷಿಯನ್ ಡಾ. ಮೃದುಲಾ ರಾಜೀವ್ ತರಗತಿ ನಡೆಸಿದರು. ಜಿಲ್ಲಾ ಎಜುಕೇಷನ್ ಮೀಡಿಯಾ ಅಧಿಕಾರಿ ಎಸ್.ಸಯನಾ, ಆರ್.ಬಿ.ಎಸ್.ಕೆ.ನಸಿರ್ಂಗ್ ಸಂಚಾಲಕಿ ಅನು ಅರವಿಂದ್ ಮೊದಲಾದವರು ಉಪಸ್ಥಿತರಿದ್ದರು.