ಉಪ್ಪಳ: ಭಾರತೀಯ ಯುವ ಕಾಂಗ್ರೇಸ್ ನೇತೃತ್ವದಲ್ಲಿ ಉತ್ತರಪ್ರದೇಶ ಲೆಕಿಮ್ ಪುರ್ ನಲ್ಲಿ ನಡೆದ ರೈತರ ಹತ್ಯೆ ಮತ್ತು ರಾಷ್ಟ್ರೀಯ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಬಂಧನ ಖಂಡಿಸಿ ಉಪ್ಪಳ ಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ಸ್ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ಪ್ರತಿಭಟನೆ ನಡೆಯಿತು.
ಉತ್ತರ ಪ್ರದೇಶ ಹಾಗೂ ಕೇಂದ್ರ ಸÀರ್ಕಾರದ ರೈತ ವಿರುದ್ಧ ಕಾನೂನು ಗಳು ಖಂಡನಾರ್ಹ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರನ್ನು ಜೀಪು ಹತ್ತಿಸಿಕೊಲೆಗೈದ ಬಿಜೆಪಿ ನಾಯಕನ ನಡೆ ಅಕ್ಷಮ್ಯ. ಕೊನೆಯ ಉಸಿರಿರುವವರೆಗೂ ಕಾಂಗ್ರೆಸ್ ಪಕ್ಷವು ರೈತರು ಪರವಾಗಿ ಹೋರಾಡುವುದು ಎಂದು ಕುಂಬಳೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ ಅವರು ಪ್ರತಿಭಟನೆ ಉದ್ಘಾಟಿಸಿ ಹೇಳಿದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಯುವಕಾಂಗ್ರೆಸ್ ಮಂಜೇಶ್ವರ ಮಂಡಲ ಅಧ್ಯಕ್ಷ ಇರ್ಷಾದ್ ಮಂಜೇಶ್ವರ ವಹಿಸಿದ್ದರು. ಮಂಗಲ್ಪಾಡಿ ಮಂಡಲ ಯುವ ಕಾಂಗ್ರೆಸ್ ಅಧ್ಯಕ್ಷ ಮನ್ಸೂರ್ ಮಂಗಲ್ಪಾಡಿ, ಮಂಜೇಶ್ವರ ಮಂಡಲ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಎಂ.ಪಿ., ಕುಂಬಳೆ ಮಂಡಲ ಯುವ ಕಾಂಗ್ರೆಸ್ ಅಧ್ಯಕ್ಷ ಶರೀಫ್ ಆರಿಕ್ಕಾಡಿ, ವಿಧಾನ ಸಭಾ ಮಂಡಲ ಯುವ ಕಾಂಗ್ರೆಸ್ ನೇತಾರರಾದ ಪೃಥ್ವಿರಾಜ್ ಶೆಟ್ಟಿ ಕುಂಬಳೆ , ಹುಸೇನ್ ಮಂಗಲ್ಪಾಡಿ, ಕೆ ಎಸ್ ಯು ನೇತಾರರಾದ ಮುನಾಫ್ ಮೊಗ್ರಾಲ್, ಮುಂತಾದವರು ಪ್ರತಿಭಟನೆಯಲ್ಲಿ ಮಾತನಾಡಿದರು. ನವೀನ್ ಶೆಟ್ಟಿ, ಕಾರ್ತಿಕ್ ಉಪ್ಪಳ, ವರುಣ್ ಉಪ್ಪಳ, ಶಮದ್ ಮೊಗ್ರಾಲ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.