HEALTH TIPS

ರೈಲ್ವೆ ನಿಲ್ದಾಣ ಅಭಿವೃದ್ಧಿ ಮಂಡಳಿ ಸ್ಥಗಿತಗೊಳಿಸಿದ ರೈಲ್ವೆ ಮಂಡಳಿ

               ನವದೆಹಲಿದೇಶದ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿದ್ದ ರೈಲ್ವೆ ನಿಲ್ದಾಣ ಅಭಿವೃದ್ಧಿ ಮಂಡಳಿ (ಐಆರ್‌ಎಸ್‌ಡಿಸಿ)ಯನ್ನು ಸ್ಥಗಿತಗೊಳಿಸುವುದಾಗಿ ರೈಲ್ವೆ ಮಂಡಳಿ ತಿಳಿಸಿದೆ.

          ರೈಲ್ವೆ ಮಂಡಳಿ ಸೋಮವಾರ ಈ ಸಂಬಂಧ ಆದೇಶವನ್ನು ಹೊರಡಿಸಿದೆ. ಈ ಮೂಲಕ ರೈಲ್ವೆ ಮಂಡಳಿಯ ಎರಡನೇ ಸಂಸ್ಥೆಯೊಂದನ್ನು ಮುಚ್ಚಿದಂತಾಗಿದೆ. ಇದೇ ಸೆಪ್ಟೆಂಬರ್ 7ರಂದು ಭಾರತೀಯ ರೈಲ್ವೆ ಪರ್ಯಾಯ ಇಂಧನ ಸಂಸ್ಥೆಯನ್ನು (ಐಆರ್‌ಒಎಎಫ್‌) ರದ್ದುಗೊಳಿಸಿತ್ತು.

         ಹಣಕಾಸು ಸಚಿವಾಲಯದ ಶಿಫಾರಸಿನ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಚಿವಾಲಯವು ನೀಡಿರುವ ವರದಿಯಲ್ಲಿ ಸರ್ಕಾರದ ಸಂಸ್ಥೆಗಳನ್ನು ಮುಚ್ಚುವುದು ಅಥವಾ ಸಚಿವಾಲಯದ ಅಡಿಯಲ್ಲಿರುವ ಬೇರೆ ಸಂಸ್ಥೆಗಳೊಂದಿಗೆ ವಿಲೀನಗೊಳಿಸುವಂತೆ ಶಿಫಾರಸು ಮಾಡಿದೆ.

          ರೈಲ್ವೆ ಮಂಡಳಿಯ ಆದೇಶದ ಪ್ರಕಾರ, ಐಆರ್‌ಎಸ್‌ಡಿಸಿ ನಿರ್ವಹಿಸುತ್ತಿದ್ದ ಎಲ್ಲ ನಿಲ್ದಾಣಗಳನ್ನು ಈಗ ಆಯಾ ವಲಯದಲ್ಲಿರುವ ರೈಲ್ವೆ ಕಚೇರಿಗಳಿಗೆ ಹಸ್ತಾಂತರಿಸಲಾಗುತ್ತದೆ. ಈ ನಿಲ್ದಾಣಗಳನ್ನು ಮುಂದೆ ಅಭಿವೃದ್ಧಿಪಡಿಸುವುದಕ್ಕಾಗಿ ಯೋಜನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಆಯಾ ವ್ಯಾಪ್ತಿಯ ವಲಯ ರೈಲ್ವೆ ಕಚೇರಿಗೆ ರವಾನಿಸಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries