ಕಾಸರಗೋಡು: ಚಿನ್ಮಯ ವಿದ್ಯಾಲಯದಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು. ಗುರುಸ್ತೋತ್ರ ದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕಾನಂದ ಸರಸ್ವತಿ ಗಣೇಶ ಚತುರ್ಥಿಯ ಶುಭವನ್ನು ಕೋರಿದರು.
ಗಣಪತಿಯ ದೊಡ್ಡ ಹೊಟ್ಟೆ ಎಲ್ಲವನ್ನೂ ತುಂಬಿಸಿಟ್ಟು ಕೊಳ್ಳುವ ಸಾಮಥ್ರ್ಯದ ಜತೆಗೆ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸಲು ಶಕ್ತರಾಗಿರಬೇಕುಎಂಬುದನ್ನು ಸೂಚಿಸುತ್ತದೆ. ಹೀಗೆ ಅನೇಕ ಅರ್ಥವತ್ತಾದ ಪರಮಾತ್ಮ ಸಂಕಲ್ಪಗಣಪತಿಯಲ್ಲಿದೆ. ಯಾವುದೇ ಕಾರ್ಯವನ್ನು ಆರಂಭಿಸುವಾಗಲೂ ಮೊದಲ ಪ್ರಾರ್ಥನೆ ಗಣಪತಿಗೆಸಲ್ಲಿಸುತ್ತೇವೆ . ಆ ಚೈತನ್ಯ ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಇಂತಹ ಭಾರತೀಯ ಸಂಸ್ಕೃತಿಯ ಬಗ್ಗೆ ಅತುಲ್ಯವಾದ ಜ್ಞಾನವನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಗಣೇಶನಅನುಗ್ರಹಕ್ಕೆ ಎಲ್ಲರೂ ಪಾತ್ರರಾಗಬೇಕೆಂದು ಸ್ವಾಮೀಜಿಯವರು ಆಶೀರ್ವದಿಸಿದರು. ಸ್ವಾಮಿ ಅಖಿಲೇಶ್ ಚೈತನ್ಯ ಗಣೇಶ ಅಥರ್ವಶೀರ್ಷ ಪಾರಾಯಣ ನಡೆಸಿದರು. ಈ ಸಂದರ್ಭ ಅಷ್ಟೋತ್ತರ ಅರ್ಚನೆ ನಡೆಯಿತು. ಚಿನ್ಮಯವಿದ್ಯಾಲಯ ಭಜನ ಮಂಡಳಿ ಗಣೇಶ ಭಜನೆಯನ್ನು ಪ್ರಸ್ತುತಪಡಿಸಿದರು.