ಬದಿಯಡ್ಕ: ಬಿಜೆಪಿ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭರತ್ ಡಿಜಿಟಲ್ ಮಿಷನ್‍ನ ಆರೋಗ್ಯ ಕಾರ್ಡ್ ನೊಂದಾವಣೆ ಶಿಬಿರವು ಬದಿಯಡ್ಕ ಗಣೇಶಮಂದಿರದಲ್ಲಿ ಭಾನಾರ ಜಿತು. ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾಧ್ಯಕ್ಷ ರವೀಶತಂತ್ರಿ ಕುಂಟಾರು ಆರೋಗ್ಯಕಾರ್ಡ್ ನೀಡಿ ಉದ್ಘಾಟಿಸಿ ಮಾತನಾಡಿ ಕೇಂದ್ರ ಸಕಾರದ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮಹಿಳಾ ಮೋರ್ಚಾವು ರಂಗಕ್ಕಿಳಿದಿದೆ. ರಾಜಕೀಯವನ್ನು ಬದಿಗೊತ್ತಿ ಪಕ್ಷಾತೀತವಾಗಿ ಜನರಿಗೆ ನೆರವಾಗುತ್ತಿರುವ ಕಾರ್ಯಕರ್ತರ ಶ್ರಮ ಶ್ಲಾಘನೀಯ ಎಂದರು.
ಬಿಜೆಪಿ ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಮಲ್ಲಡ್ಕ, ಬ್ಲಾಕ್ ಪಂಚಾಯಿತಿ ಸದಸ್ಯೆ ಜಯಂತಿ ಕುಂಟಿಕಾನ ನೇತೃತ್ವವನ್ನು ವಹಿಸಿದ್ದರು. ಪಕ್ಷದ ನೇತಾರರಾದ ಅವಿನಾಶ್ ರೈ, ಬಾಲಕೃಷ್ಣ ಶೆಟ್ಟಿ, ಸೌಮ್ಯಾ ಮಹೇಶ್ ನಿಡುಗಳ, ಮಹೇಶ್ ವಳಕ್ಕುಂಜ, ಶರಣ್ಯ ಬದಿಯಡ್ಕ, ವನಿತಾ, ಬಾಲಸುಬ್ರಹ್ಮಣ್ಯ ಮಲ್ಲಡ್ಕ, ರಾಜೇಶ್ ರೈ, ಶಿವಪ್ರಸಾದ ಬದಿಯಡ್ಕ, ಅನಂತ ಪ್ರಸಾದ್ ಹಾಗೂ ಕಾರ್ಯಕರ್ತರರು ಸಹಕರಿಸಿದರು. 300ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬುದನ್ನು ಅರಿತು ಈ ಶಿಬಿರವನ್ನು ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧೆಡೆಗಳಲ್ಲಿ ಮುಂದಿನ ದಿನಗಳಲ್ಲಿ ಇಂತಹ ಶಿಬಿರಗಳನ್ನು ನಡೆಸಲಾಗುವುದು. ಜನತೆಯು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.
- ಅಶ್ವಿನಿ ಮಲ್ಲಡ್ಕ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ