ಮುಂಬೈ: ವೀರ ಸಾವರ್ಕರ್ ಅವರ ಕ್ಷಮಾದಾನ ಅರ್ಜಿಗಳ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಸಂಬಂಧಿಸಿ ಕಾವೇರಿದ ರಾಜಕೀಯ ಮಾತಿನ ಚಕಮಕಿಯ ನಡುವೆ ಬುಧವಾರ ಪ್ರತಿಕ್ರಿಯಿಸಿರುವ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಎಲ್ಲಾ ರಾಜಕೀಯ ಕೈದಿಗಳಿಗೆ ಸಾಮಾನ್ಯ ಕ್ಷಮೆಯನ್ನು ಕೋರಿದ್ದರು ಎಂದು ಹೇಳಿದರು.
ಸಾವರ್ಕರ್ ನಿಜವಾಗಿಯೂ ಬ್ರಿಟೀಷರ ಕ್ಷಮೆ ಕೇಳಿದ್ದರೆ ಅವರಿಗೆ ಕೆಲವು ಹುದ್ದೆಗಳನ್ನು ನೀಡಲಾಗುತ್ತಿತ್ತು ಎಂದು ಅವರು ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
5,000 ವರ್ಷಗಳ ಇತಿಹಾಸವಿರುವ ದೇಶದ ಸೃಷ್ಟಿಗೆ ಸಾವಿರಾರು ಜನರು ಕೊಡುಗೆ ನೀಡಿರುವುದರಿಂದ ಮಹಾತ್ಮ ಗಾಂಧಿಯಂತಹ ಒಬ್ಬರನ್ನು ರಾಷ್ಟ್ರಪಿತ ಎಂದು ಕರೆಯಲಾಗುವುದಿಲ್ಲ ಎಂದು ರಂಜಿತ್ ಸಾವರ್ಕರ್ ಹೇಳಿದರು.