ಕಾಸರಗೋಡು: ಪ್ರವಾದಿ ಮಹಮ್ಮದ್ ಅವರ ಜನ್ಮ ದಿನಾಚರಣೆ ಈದ್‍ಮಿಲಾದ್ ಜಿಲ್ಲೆಯ ವಿವಿಧೆಡೆ ಸರಳವಾಗಿ ಆಚರಿಸಲಾಯಿತು. ಮಸೀದಿಗಳಲ್ಲಿ ಕೋವಿಡ್ ಮಾನದಂಡ ಪಾಲಿಸಿಕೊಂಡು ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು. ಈದ್‍ಮಿಲಾದ್ ಅಂಗವಾಗಿ ವಿವಿಧ ಮದ್ರಸಾ ಸಮಿತಿಗಳ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಕಲಾಗಿದ್ದ ವೇದಿಕೆ ಹಾಗೂ ವೇದಿಕೇತರ ಸ್ಪರ್ಧೆಗಳಲ್ಲಿ ವಇಜೇತರಾದವರಿಗೆ ಬಹುಮಾನ ನೀಡುವ ಕಾರ್ಯಕ್ರಮಗಳೂ ನಡೆಯಿತು.
ಕಾಸರಗೋಡು ತಳಂಗರೆ ನೂರುಲ್ ಹುದಾ ಮದ್ರಸಾ ಸಮಿತಿ ವತಿಯಿಂದ ನಡೆದ ಸಮಾರಂಭದಲ್ಲಿ ಸಮಿತಿ ಅಧ್ಯಕ್ಷ ಎಂ.ಎಸ್ ಅಬೂಬಕ್ಕರ್ ಧ್ವಜಾರೋಹಣ ನಡೆಸಿದರು. ಜಿಲ್ಲೆಯ ವಿವಿಧೆಡೆ ಮೆರವಣಿಗೆ, ಪ್ರವಾದಿ ಸಮರಣೆ ನಡೆಯಿತು.