HEALTH TIPS

ಕೊನೆಗೂ ತಿಳಿಯಿತು ಸ್ಪರ್ಶದ ರಹಸ್ಯ: 'ಟಚ್‌ ಸೈನ್ಸ್‌' ಅಧ್ಯಯನಕ್ಕೆ ಇಬ್ಬರಿಗೆ ಸಿಕ್ಕಿತು ನೊಬೆಲ್‌ ಪ್ರಶಸ್ತಿ

                   ವಾಷಿಂಗ್ಟನ್‌: ಮನುಷ್ಯದ ದೇಹದ ಮೇಲೆ ಅಧ್ಯಯನ ನಡೆಸಿದ್ದಷ್ಟೂ ಕಡಿಮೆಯೇ. ಇಲ್ಲಿಯವರೆಗೆ ಬೆಳಕು, ಧ್ವನಿ, ವಾಸನೆ ಮತ್ತು ರುಚಿಗೆ ನಮ್ಮ ದೇಹ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬ ಬಗ್ಗೆ ಹಲವು ದಶಕಗಳವರೆಗೆ ತಲೆ ಕೆಡಿಸಿಕೊಂಡಿದ್ದ ವಿಜ್ಞಾನಿಗಳು ಕೊನೆಗೂ ಅದನ್ನು ಕಂಡುಹಿಡಿದಿದ್ದರು. ಆದರೆ ಸ್ಪರ್ಶದ ಕುರಿತಂತೆ ಇದುವರೆಗೆ ಸರಿಯಾದ ಜ್ಞಾನ ಸಿಕ್ಕಿರಲಿಲ್ಲ. ಅರ್ಥಾತ್‌, ನಾವು ಹೇಗೆ ಬಿಸಿ ಅಥವಾ ತಣ್ಣಗಿದೆ ಎಂಬುದನ್ನು ನಾವು ಹೇಗೆ ಗ್ರಹಿಕೆ ಮಾಡುತ್ತೇವೆ, ಒತ್ತಡ ಅಥವಾ ದೈಹಿಕ ನೋವಿನ ಭಾವನೆ ಹೇಗಿರುತ್ತದೆಂಬುದರ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದರೂ ಇದು ವಿಜ್ಞಾನಿಗಳಿಗೆ ಅಷ್ಟೊಂದು ತೃಪ್ತಿ ಕೊಟ್ಟಿರಲಿಲ್ಲ.

                       ಇದೀಗ ಟಚ್‌ ಸೈನ್ಸ್‌ ಅಂದರೆ ಸ್ಪರ್ಶ ವಿಜ್ಞಾನದ ಡಿಕೋಡ್‌ ಮಾಡಲಾಗಿದ್ದು, ಈ ನಿಮಿತ್ತ ಇಬ್ಬರು ಅಮೆರಿಕದ ಸಂಶೋಧಕರಿಗೆ ನೊಬೆಲ್‌ ಪ್ರಶಸ್ತಿ ಸಿಕ್ಕಿದೆ.
             ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1990ರ ದಶಕದ ಉತ್ತರಾರ್ಧದಲ್ಲಿ ಮತ್ತು 2000ರ ದಶಕದ ಆರಂಭದಲ್ಲಿ ಇವರು ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಇದೀಗ ಅದು ಸ್ಪರ್ಶ ವಿಜ್ಞಾನದ ಕುರಿತು ಸಂಪೂರ್ಣ ಸಮಸ್ಯೆಯನ್ನು ಬಗೆಹರಿಸಿದೆ ಎನ್ನಲಾಗಿದೆ. ಆದ್ದರಿಂದ ಇವರಿಬ್ಬರಿಗೆ 2021ರ ಫಿಸಿಯಾಲಜಿ ನೊಬೆಲ್ ಪ್ರಶಸ್ತಿಯ ಜಂಟಿಯಾಗಿ ಘೋಷಿಸಲಾಗಿದೆ.
              ಇವರು ತಮ್ಮ ಸಂಶೋಧನೆಗೆ ಇಟ್ಟ ಹೆಸರು 'ತಾಪಮಾನ ಮತ್ತು ಸ್ಪರ್ಶಕ್ಕಾಗಿ ರಿಸೆಪ್ಟರ್‌ ಅಥವಾ ಗ್ರಾಹಕಗಳ ಸಂಶೋಧನೆ' ಎಂದು. ಮಾನವ ದೇಹದಲ್ಲಿನ ಶಾಖ ಮತ್ತು ಯಾಂತ್ರಿಕ ಒತ್ತಡಕ್ಕೆ ಸೂಕ್ಷ್ಮವಾಗಿರುವ ಆಣ್ವಿಕ ಸಂವೇದಕಗಳ ಪರಿಚಯವನ್ನು ಇವರು ಮಾಡಿದ್ದಾರೆ. ಅರ್ಥಾತ್‌ ನಮ್ಮನ್ನು ಬಿಸಿ ಅಥವಾ ತಣ್ಣಗೆ ಅಥವಾ ನಮ್ಮ ಚರ್ಮದ ಮೇಲೆ ತೀಕ್ಷ್ಣವಾದ ವಸ್ತುವಿನ ಸ್ಪರ್ಶವನ್ನುಂಟುಮಾಡುವ ಸಂವೇದಕಗಳನ್ನು ಇವರು ಕಂಡುಹಿಡಿದಿದ್ದಾರೆ.
                     ಇದಕ್ಕೆ ಉದಾಹರಣೆ ನೀಡಿರುವ ಅವರು, ಸ್ಮೋಕ್‌ ಡಿಕೆಕ್ಟರ್‌ ಒಂದು ನಿರ್ದಿಷ್ಟ ಹೊಸ್ತಿಲನ್ನು ಮೀರಿ ಹೊಗೆಯನ್ನು ಗ್ರಹಿಸಿದಾಗ ಅಲಾರಂ ಕಳಿಸುತ್ತದೆ. ಅದೇ ರೀತಿ, ಬಿಸಿ ಅಥವಾ ತಂಪು ಏನಾದರೂ ದೇಹವನ್ನು ಮುಟ್ಟಿದಾಗ, ಶಾಖ ರಿಸೆಪ್ಟರ್‌ಗಳು ನಿರ್ದಿಷ್ಟ ರಾಸಾಯನಿಕಗಳನ್ನು ನರ ಕೋಶಗಳ ಪೊರೆಯ ಮೂಲಕ ಹಾದುಹೋಗುವಂತೆ ಮಾಡುತ್ತವೆ. ಆ ಸಮಯದಲ್ಲಿ ಜೀವಕೋಶದೊಳಗೆ ರಾಸಾಯನಿಕದ ಪ್ರವೇಶವು ವಿದ್ಯುತ್ ವೋಲ್ಟೇಜ್‌ನಲ್ಲಿ ಸಣ್ಣ ಬದಲಾವಣೆ ಉಂಟುಮಾಡುತ್ತದೆ, ಇದನ್ನು ನರಮಂಡಲವು ಗುರುತಿಸುತ್ತದೆ. ಆಗ ನಮಗೆ ಬಿಸಿ, ತಣ್ಣಗಿನ ಅನುಭವವಾಗುತ್ತದೆ ಎಂದಿದ್ದಾರೆ.
                    ಅದೇ ರೀತಿ ಮೂತ್ರಕೋಶವು ತುಂಬಿರುವಾಗ, ಮೂತ್ರಕೋಶದಲ್ಲಿ ಒತ್ತಡ ಹೆಚ್ಚಾಗುತ್ತದೆ. ಒತ್ತಡದಲ್ಲಿನ ಈ ಬದಲಾವಣೆಯು ಒತ್ತಡ ಗ್ರಾಹಕಗಳಿಂದ ಗ್ರಹಿಸಲ್ಪಟ್ಟಿದೆ ಮತ್ತು ನರಮಂಡಲಕ್ಕೆ ಪ್ರಸಾರವಾಗುತ್ತದೆ, ಇದು ತನ್ನನ್ನು ತಾನೇ ನಿವಾರಿಸಲು ಈ ಪ್ರಚೋದನೆಯನ್ನು ಸೃಷ್ಟಿಸುತ್ತದೆ. ಇದೇ ರೀತಿ ದೇಹದ ಕೆಲವು ನರಗಳ ಪ್ರಚೋದನೆ ಮೇರೆಗೆ ನಾವು ಸ್ಪರ್ಶಜ್ಞಾನವನ್ನು ಪಡೆಯಬಹುದಾಗಿ ಎಂದು ಅವರು ಸವಿಸ್ತಾರವಾಗಿ ವರದಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries