HEALTH TIPS

ಸಹಕಾರಿ ಬ್ಯಾಂಕ್ ಗಳಲ್ಲಿ ಬೃಹತ್ ಹಗರಣಳು: ಬಿಜೆಪಿಯ ಆರೋಪಗಳನ್ನು ಒಪ್ಪಿಕೊಂಡ ಸಚಿವರು: ಕೆ ಸುರೇಂದ್ರನ್

                      ತಿರುವನಂತಪುರಂ: ಕೇರಳದ 49 ಸಹಕಾರಿ ಬ್ಯಾಂಕ್ ಗಳಲ್ಲಿ ಅಕ್ರಮಗಳಿವೆ ಎಂದು ಸಹಕಾರ ಸಚಿವ ವಿ ಎನ್ ವಾಸವನ್ ಹೇಳಿಕೆ ಬಿಜೆಪಿಯ ಆರೋಪಗಳನ್ನು ದೃಢಪಡಿಸಿದೆ  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಹೇಳಿರುವರು. ಸಿಪಿಎಂ ನಿಯಂತ್ರಣದಲ್ಲಿರುವ ಸಹಕಾರಿ ಬ್ಯಾಂಕುಗಳಲ್ಲಿ ಎಲ್ಲಡೆಯೂ ದೊಡ್ಡ ಹಗರಣಗಳಾಗಿವೆ.  ಸಿಪಿಎಂ ಸಹಕಾರಿ ಬ್ಯಾಂಕುಗಳನ್ನು ದೊಡ್ಡ ಪ್ರಮಾಣದ ಕಪ್ಪು ಹಣದ ವಹಿವಾಟಿನ ಕೇಂದ್ರಗಳಾಗಿ ಪರಿವರ್ತಿಸುತ್ತಿದೆ ಎಂದು ಸುರೇಂದ್ರನ್ ಹೇಳಿದರು.

               ಪೇರವೂರು ಬ್ಯಾಂಕ್ ನಲ್ಲಿ ಮಾತ್ರವಲ್ಲದೆ ಕಣ್ಣೂರು ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 150 ಬ್ಯಾಂಕ್ ಗಳಲ್ಲಿ ಹೂಡಿಕೆದಾರರಿಗೆ ವಂಚಿಸಲಾಗಿದೆ. ಈ ಹಿಂದೆ ಬಿಜೆಪಿ ಇದನ್ನು ಎತ್ತಿ ತೋರಿಸಿದೆ. ಆದರೆ, ಕೇಂದ್ರ ಸರ್ಕಾರವು ಸಹಕಾರಿ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದೆ ಮತ್ತು ರಾಜ್ಯದ ಎಲ್ಲಾ ಸಹಕಾರಿ ಬ್ಯಾಂಕುಗಳು ಪಾರದರ್ಶಕವಾಗಿವೆ ಎಂದು ಸರ್ಕಾರ ಉತ್ತರಿಸಿದೆ.

                   ಆಗಿನ ಸಹಕಾರ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರು 2019 ರಲ್ಲಿ ಕರಿವನೂರು ಬ್ಯಾಂಕ್ ಹಗರಣದ ಬಗ್ಗೆ ದೂರು ಸ್ವೀಕರಿಸಿದ್ದಾರೆ ಎಂದು ವಾಸವನ್ ವಿಧಾನಸಭೆಗೆ ಲಿಖಿತವಾಗಿ ತಿಳಿಸಿರುವುದು ಆಘಾತಕಾರಿಯಾಗಿದೆ. ಸಿಪಿಎಂ ನಾಯಕರು ಹಗರಣದ ಹಿಂದೆ ಇದ್ದ ಕಾರಣ ಅಂದಿನ ಸಚಿವರು ದೂರನ್ನು ಮುಚ್ಚಿಟ್ಟರು. 69 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು. ಅವರಲ್ಲಿ ಎಷ್ಟು ಮಂದಿ ಸಿಪಿಎಂ ನಾಯಕರು ಎಂದು ವಾಸವನ್ ಸ್ಪಷ್ಟಪಡಿಸಬೇಕು ಎಂದೂ ಸುರೇಂದ್ರನ್ ಒತ್ತಾಯಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries