ಕಾಸರಗೋಡು: ಸ್ಥಳಿಯ ರುಚಿ ವೈವಿಧ್ಯಕ್ಕೆ ಆದ್ಯತೆ ನೀಡುವ ಮೂಲಕ ನಡೆಯುತ್ತಿರುವ ಕುಟುಂಬಶ್ರೀ ಉಪಹಾರ ಮೇಳ ಗಮನಸೆಳೆಯುತ್ತಿದೆ.
ಸ್ವಾವಲಂಬಿ ಗ್ರಾಮ ಎಂಬ ಉದ್ದೇಶದೊಮದಿಗೆ ಕಾಸರಗೋಡು ಜಿಲ್ಲೆಯ 42 ಸಿ.ಡಿ.ಎಸ್.ಗಳು ಕುಟುಂಬಶ್ರೀ ಉಪಹಾರ ಮೇಳ ನಡೆಸುತ್ತಿವೆ. ಉತ್ತಮ ಗುಣಮಟ್ಟದ, ಕಲಬೆರಕೆಯಿಲ್ಲದ ಪರಂಪರಾಗತ ಮತ್ತು ಆಧುನಿಕ ಸಿಹಿತಿನಿಸುಗಳನ್ನು ಇಲ್ಲಿ ಮಾರಾಟ ನಡೆಸಲಾಗುತ್ತಿದೆ. ಪ್ರತಿ ಕುಟುಂಬಶ್ರೀ ಯೂನಿಟ್ ಗಳ ನೇತೃತ್ವದಲ್ಲಿ ತಯಾರಿಸಲಾಗುವ ಕಾಸರಗೋಡು ಜಿಲ್ಲೆಯ ಸ್ವಂತಿಕೆ ಹೊಂದಿರುವ ತಿನಿಸುಗಳು, ವಿವಿಧ ರೀತಿಯ ಪಾಸಗಳು ಪ್ರತಿ ಕಡೆಗಳ ಮೇಳದ ಆಕರ್ಷಣೆಯಾಗಿವೆ. ಪ್ರತಿ ದಿನ ವಾರ್ಡ್ ಮಟ್ಟದಲ್ಲಿ ಆಯ್ಕೆ ಮಾಡಲಾದ ಕುಟುಂಬಶ್ರೀ ಯೂನಿಟ್ ಗಳ ನೇತೃತ್ವದಲ್ಲಿ ಉತ್ಪನ್ನಗಳ ಪ್ರದರ್ಶನ-ಮಾರಾಟ ನಡೆದುಬರುತ್ತಿವೆ.
ಗಾಂಧಿ ಜಯಂತಿಯಂದು ಆರಂಭಗೊಂಡು ಒಂದು ವಾರದ ಅವಧಿಯಲ್ಲಿ ಈ ಆಹಾರ ಮೇಳ ನಡೆದುಬರುತ್ತಿದೆ. ಈ ಸರಣಿಯ ಜಿಲ್ಲಾ ಮಟ್ಟದ ಉದ್ಘಾಟನೆ ಮಡಿಕೈಯಲ್ಲಿ ಜರುಗಿತು. ಮಡಿಕೈ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು.