ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತ್ರ ಶಕ್ತಿ ದುರ್ಗ ವಾಹಿನಿ ವರ್ಕಾಡಿ ಖಂಡ ಸಮಿತಿ ಆಶ್ರಯದಲ್ಲಿ ಸುಂಕದಕಟ್ಟೆಯಲ್ಲಿ ಶಾರದಾ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸಮಿತಿ ಅಧ್ಯಕ್ಷ ಅಚ್ಚುತ ಆರಿಬೈಲು ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ವೇದಮೂರ್ತಿ ಬೋಳಂತಕೋಡಿ ರಾಮಭಟ್ ಧಾರ್ಮಿಕ ಭಾಷಣ ಮಾಡಿದರು. ವಿಶ್ವಹಿಂದು ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಆರಿಬೈಲು ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವುದರಿಂದ ಭಾರತ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಅದಕ್ಕೋಸ್ಕರ ಹಿಂದೂಗಳು ಜಾಗೃತರಾಗಬೇಕು ಎಂದು ಕರೆಕೊಟ್ಟರು.
ಮಂಜೇಶ್ವರ ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಜಿಲ್ಲಾ ಕಾರ್ಯದರ್ಶಿ ಉಳುವಾನ ಶಂಕರ ಭಟ್, ವರ್ಕಾಡಿ ಖಂಡ ಸಮಿತಿ ಅಧ್ಯಕ್ಷ ಗೋವಿಂದರಾಮ, ಪಂಚಾಯತಿ ಸದಸ್ಯೆ ಗೀತಾ ಭಾಸ್ಕರ್ ಉಪಸ್ಥಿತರಿದ್ದರು. ಮಕ್ಕಳಿಗೆ ವಿದ್ಯಾರಂಭ ಮಾಡಲಾಯಿತು.