ಉಪ್ಪಳ: ಕಯ್ಯಾರು ಶ್ರೀರಾಮಕೃಷ್ಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗೆ ಪೈವಳಿಕೆ ಗ್ರಾ.ಪಂ. ವತಿಯಿಂದ ನಿರ್ಮಿಸಿದ ನೂತನ ಶೌಚಾಲಯವನ್ನು ಮಂಗಳವಾರ ಉದ್ಘಾಟಿಸಲಾಯಿತು.
ನೂತನ ಶೌಚಾಲಯದ ನಾಮ ಫಲಕವನ್ನು ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಅನಾವರಣಗೊಳಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮನೆ ಹಾಗೂ ಶಾಲಾ ಪರಿಸರ ಶುಚಿಯಾಗಿದ್ದರೆ ಸಮಾಜ ಶುಚಿಯಾಗಿರುವುದು. ಈ ನಿಟ್ಟಿನಲ್ಲಿ ಗ್ರಾ.ಪಂ. ಮೂಲಕ ಗರಿಷ್ಠ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಝಡ್.ಎ. ಕಯ್ಯಾರ್ ಅ|ಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾ.ಪಂ.ಸದಸ್ಯೆ ಫಾತಿಮತ್ ಜೌರ, ಗ್ರಾ.ಪಂ. ಮಾಜೀ ಸದಸ್ಯ ಪ್ರಸಾದ್ ರೈ ಕಯ್ಯಾರ್, ಶಾಲಾಭಿವೃದ್ದಿ ಸಮಿತಿ ಸದಸ್ಯ ಮೋಹನ ರೈ, ಶ್ರೀರಾಮಕೃಷ್ಣ ಚಾರಿಟೇಬಲ್ ಟ್ರಸ್ಟ್ ಸದಸ್ಯ, ದಳಿಕುಕ್ಕು ಶಾಲಾ ಮುಖ್ಯೋಪಾಧ್ಯಾಯ ವೆಂಕಪ್ಪ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ಪ್ರೇಮಲತ ಸಿ.ಪಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಖಾಲಿದ್, ಉಪಾಧ್ಯಕ್ಷ ಗೋಕುಲ್ ದಾಸ್, ಮಾತೃಸಂಘದ ಅಧ್ಯಕ್ಷೆ ಸರೋಜ ಟೀಚರ್, ಉಪಾಧ್ಯಕ್ಷೆ ಸರಿತ ಮೊದಲಾದವರು ಉಪಸ್ಥಿತರಿದ್ದರು.