ಉಪ್ಪಳ: ಆಲ್ ಕೇರಳ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ ಉಪ್ಪಳ ಘಟಕದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಉಪ್ಪಳ ಸತ್ಯನಾರಾಯಣ ಸಭಾಂಗಣದಲ್ಲಿ ನಡೆಯಿತು.
ಘಟಕದ ಅಧ್ಯಕ್ಷ ನವಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಎ.ಕೆ.ಪಿ.ಎ ವಲಯ ಸಮಿತಿ ಅಧ್ಯಕ್ಷ ವೇಣು.ವಿ.ವಿ ದೀಪ ಬೆಳಗಿಸಿ ಉದ್ಘಾಟಿಸಿ ಸಂಘಟನೆಯ ಬೆಳವಣಿಗೆ ಹಾಗೂ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಸಂಘಟನೆಯ ಜಿಲ್ಲಾಧ್ಯಕ್ಷ ಶೆರೀಫ್, ಜಿಲ್ಲಾ ಕಾರ್ಯದರ್ಶಿ ಮನೋಹರನ್, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಆಚಾರ್ಯ ಸುದರ್ಶನ್.ಟಿ.ಕೆ, ವಲಯ ಕೋಶಾಧಿಕಾರಿ ವಿಜಯನ್ ಶೃಂಗಾರ್ ಉಪ್ಪಳ, ಜಿಲ್ಲಾ ಜೊತೆ ಕಾರ್ಯದರ್ಶಿ ಸುನಿಲ್ ಕುಮಾರ್ ಶುಭಾಂಶನೆಗೈದರು.ಈ ವೇಳೆ ಹಿರಿಯ ಸದಸ್ಯರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಘಟಕದ ಕಾರ್ಯದರ್ಶಿ ರಿಯಾಜ್ ಸ್ವಾಗತಿಸಿ, ವರದಿ ವಾಚಿಸಿದರು. ಕೋಶಾಧಿಕಾರಿ ರವೀಂದ್ರ ಆಚಾರ್ಯ ಪ್ರತಾಪನಗರ ಲೆಕ್ಕಪತ್ರ ಮಂಡಿಸಿದರು. ಈ ವೇಳೆ 2021-22 ರ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.