HEALTH TIPS

ಅಡುಗೆ ಎಣ್ಣೆ ದರ ತಗ್ಗಿಸಲು ದಾಸ್ತಾನು ಮಿತಿ ಮೇಲೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

               ನವದೆಹಲಿ: 2022ರ ಮಾರ್ಚ್ 31ರವರೆಗೆ ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ದಾಸ್ತಾನು ಮಿತಿ ಮೇಲೆ ನಿರ್ಬಂಧ ಹೇರಿ ಆಹಾರ ಮತ್ತು ಸಾರ್ವಜನಿಕ ಪಡಿತರ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

            ಪರವಾನಗಿಗಳ ಅಗತ್ಯತೆಗಳನ್ನು ತೆಗೆದು ಹಾಕುವುದು, ದಾಸ್ತಾನು ಮಿತಿ ಮತ್ತು ನಿರ್ದಿಷ್ಟ ಆಹಾರ ಉತ್ಪನ್ನಗಳ ಸಾಗಾಣೆಗೆ ನಿರ್ಬಂಧ (ತಿದ್ದುಪಡಿ) ಆದೇಶ- 2021 ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂದರೆ 2021ರ ಸೆಪ್ಟೆಂಬರ್ 8ರಿಂದ ಅನ್ವಯವಾಗುವಂತೆ ಹೊರಡಿಸಲಾಗಿದೆ. ಭವಿಷ್ಯದ ವ್ಯಾಪಾರದಲ್ಲಿ ಸಾಸಿವೆ ಎಣ್ಣೆ ಮತ್ತು ಎಣ್ಣೆ ಬೀಜಗಳನ್ನು ಎನ್​ಸಿಡಿಇಎಕ್ಸ್‌ನಿಂದ ಅಮಾನತು ಮಾಡಲಾಗಿದ್ದು, ಅದು 2021ರ ಅಕ್ಟೋಬರ್ 8ರಿಂದ ಜಾರಿಗೆ ಬಂದಿದೆ.

              ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಮತ್ತಷ್ಟು ಕುಸಿತವಾಗಲಿದ್ದು, ಆ ಮೂಲಕ ದೇಶಾದ್ಯಂತ ಗ್ರಾಹಕರಿಗೆ ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ಕೊಂಚ ನಿರಾಳತೆ ಸಿಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಏರಿಕೆಯಾಗಿರುವುದು ದೇಶೀಯವಾಗಿ ಖಾದ್ಯ ತೈಲಗಳ ಬೆಲೆ ಮೇಲೂ ಗಮನಾರ್ಹ ಪರಿಣಾಮ ಬೀರಿತ್ತು.


             ಇದೀಗ ಭಾರತ ಸರ್ಕಾರ ಖಾದ್ಯ ತೈಲದಂತಹ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ಬಹುಹಂತದ ಕಾರ್ಯತಂತ್ರವನ್ನು ರೂಪಿಸಿದೆ. ಆಮದು ಸುಂಕ ವ್ಯವಸ್ಥೆ ಏಕರೂಪಗೊಳಿಸುವುದು, ದಾಸ್ತಾನುಗಾರರು ತಮ್ಮ ಬಳಿ ಹೊಂದಿರುವ ದಾಸ್ತಾನುಗಳನ್ನು ಸ್ವಯಂ ಘೋಷಣೆ ಮಾಡಿಕೊಳ್ಳಲು ವೆಬ್ ಪೋರ್ಟಲ್ ಆರಂಭ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

           ಖಾದ್ಯ ತೈಲಗಳ ಬೆಲೆಯನ್ನು ದೇಶೀಯವಾಗಿ ಮತ್ತಷ್ಟು ತಗ್ಗಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದ್ದು, ಕೇಂದ್ರ ಸರ್ಕಾರ ಹೊರಡಿಸಿರುವ ಈ ಆದೇಶವನ್ನು ಎಲ್ಲ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ. ಈ ಆದೇಶದಡಿ ಖಾದ್ಯ ತೈಲಗಳು ಮತ್ತು ಎಣ್ಣೆ ಬೀಜಗಳ ದಾಸ್ತಾನು ಮಿತಿಯನ್ನು ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ನಿರ್ಧರಿಸಲಿವೆ.

ಅವು ಆಯಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಲ್ಲಿನ ಬಳಕೆ ಮತ್ತು ಲಭ್ಯವಿರುವ ದಾಸ್ತಾನು ಆಧರಿಸಿ, ಈ ಕೆಳಗಿನವುಗಳನ್ನು ಹೊರತುಪಡಿಸಿ ನಿರ್ಧಾರಗಳನ್ನು ಕೈಗೊಳ್ಳಲಿವೆ:

1. ವಿದೇಶಿ ವ್ಯಾಪಾರ ನಿರ್ದೇಶನಾಲಯದಿಂದ ಕೋಡ್ ನಂಬರ್ ಪಡೆದಿರುವ ಆಮದುದಾರರು, ರಫ್ತುದಾರರು, ಸಂಸ್ಕರಣದಾರರು, ಕಾರ್ಖಾನೆಗಳ ಮಾಲಿಕರು, ಎಣ್ಣೆ ತೆಗೆಯುವವರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಅಥವಾ ಡೀಲರ್‌ಗಳು ತಮ್ಮ ಇಡೀ ರಫ್ತು ಮಾಡಲಿರುವ ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ಪ್ರಮಾಣ ರಫ್ತು ದಾಸ್ತಾನು ಮಿತಿಯ ವ್ಯಾಪ್ತಿಯಲ್ಲಿದೆ ಎಂದು ನಿರೂಪಿಸಬೇಕು.

2. ಆಮದುದಾರರು, ಸಂಸ್ಕರಣೆದಾರರು, ಕಾರ್ಖಾನೆ ಮಾಲಿಕರು, ಎಣ್ಣೆ ತೆಗೆಯುವವರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಅಥವಾ ಡೀಲರ್‌ಗಳು ಅಥವಾ ಆಮದುದಾರರು ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳಿಗೆ ಸಂಬಂಧಿಸಿದಂತೆ ಇಡೀ ಪ್ರಮಾಣ ಆಮದು ಮೂಲದಿಂದ ಪಡೆದಿರುವುದು ಎಂಬುದನ್ನು ನಿರೂಪಿಸಬೇಕು.

ಒಂದು ವೇಳೆ ಸಂಬಂಧಿಸಿದ ಕಾನೂನುಬದ್ಧ ಸಂಸ್ಥೆಗಳು ನಿಗದಿಗಿಂತ ಹೆಚ್ಚಿನ ದಾಸ್ತಾನನ್ನು ಹೊಂದಿದ್ದರೆ ಅವುಗಳು ಆ ಕುರಿತು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ (https://evegoils.nic.in/EOSP/login) ಪೋರ್ಟಲ್‌ನಲ್ಲಿ ಘೋಷಣೆ ಮಾಡಿಕೊಳ್ಳಬೇಕು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿರ್ಧರಿಸಿದ ದಾಸ್ತಾನು ಮಿತಿಯೊಳಗೆ ತಂದುಕೊಳ್ಳಬೇಕು. ಈ ಕಾರ್ಯ ಸಂಬಂಧಿಸಿದ ಅಧಿಕಾರಿಗಳು ಆದೇಶ ಹೊರಡಿಸಿದ 30 ದಿನಗಳಲ್ಲಿ ಆಗಬೇಕು.

           ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಗಾರರು ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ದಾಸ್ತಾನನ್ನು ನಿರಂತರವಾಗಿ ಘೋಷಿಸುವುದನ್ನು ಖಾತ್ರಿಪಡಿಸಬೇಕಾಗಿದೆ ಮತ್ತು ಆ ಕುರಿತ ಮಾಹಿತಿಯನ್ನು ಇಲಾಖೆಯ ಪೋರ್ಟಲ್ ಅಂದರೆ ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಇಲಾಖೆಯ (https://evegoils.nic.in/EOSP/login) ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries