ಬದಿಯಡ್ಕ: ಕ್ಯಾಂಪೆÇ್ಕೀದ ಚಿತ್ತ ಸದಸ್ಯರ ಆರೋಗ್ಯದತ್ತ ಯೋಜನೆಯಡಿಯಲ್ಲಿ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯ ಹರೀಶ್ ಉಬ್ರಂಗಳ ಇವರ ತಂದೆ ಶಶಿಧರ ಅವರಿಗೆ ಆಂಜಿಯೋಪ್ಲಾಸ್ಟಿ ಹೃದಯ ಚಿಕಿತ್ಸೆಗೆ ಧನಸಹಾಯವಾಗಿ ರೂ.50,000 ವನ್ನು ನೀಡಲಾಯಿತು.
ಸೋಮವಾರ ಬದಿಯಡ್ಕ ಶಾಖೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ದೇಶಕರಾದ ಪದ್ಮರಾಜ ಪಟ್ಟಾಜೆ ಹಾಗೂ ಸತ್ಯನಾರಾಯಣ ಪ್ರಸಾದ ಇವರ ಉಪಸ್ಥಿತಿಯಲ್ಲಿ ಚೆಕ್ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬದಿಯಡ್ಕ ಪ್ರಾದೇಶಿಕ ಪ್ರಬಂಧಕ ಗಿರೀಶ್ ಇ., ಶಾಖಾ ಪ್ರಬಂಧಕ ದಿನೇಶ್ ಕುಮಾರ್ ಕೆ. ಹಾಗೂ ಶಾಖೆಯ ಸಿಬ್ಬಂದಿಗಳು ಜೊತೆಗಿದ್ದರು.