ಕಾಸರಗೋಡು: ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ವಲಿಯಪರಂಬ ಗ್ರಾಮ ಪಂಚಾಯಿತಿಯ ಮಾಡಕ್ಕಾಲ್-ತ್ರಿಕರಿಪುರ ಕಡಪ್ಪುರಂ-ವಡಕ್ಕೇ ವಳಪ್ ಪ್ರದೇಶದಲ್ಲಿ ಹೊಳೆಗೆ ಬೋಟ್ ಸರ್ವೀಸ್ ಆರಂಭಿಸಲು ತೀರ್ಮಾನಿಸಲಾಗಿದ್ದು, ಈ ಮೂಲಕ ಸ್ಥಳೀಯಜನತೆಯ ಸಂಚಾರ ಸಮಸ್ಯೆಗೆ ಪರಿಹಾರ ಲಭಿಸಲಿದೆ.
ಶಾಸಕ ಎಂ.ರಾಜಗೋಪಾಲನ್ ಅವರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ನಿರ್ಮಿಸಲಾದ 'ಗ್ರಮ್ನ'ಎಂಬ ಸಂಚಾರಿ ಬೋಟು ಶೀಘ್ರದಲ್ಲೇ ತನ್ನ ಪ್ರಯಾಣ ಸೇವೆ ಆರಂಭಿಸಲಿದೆ. ಬೋಟು ಮಾಡಕ್ಕಲ್ಲಿಗೆ ಆಗಮಿಸಿದ ನಂತರ ಮಾರಿಟೈಂ ಮಂಡಳಿಯ ಪ್ರಧಾನ ಸರ್ವೇಯರ್, ಪೆÇೀರ್ಟ್ ಅಧಿಕಾರಿ, ಪೆÇೀರ್ಟ್ ನಿರ್ದೇಶನಾಲಯದ ಸಿಬ್ಬಂದಿ ಮೊದಲಾದವರು ಟ್ರಯಲ್ ರನ್ ನಡೆಸಿ ಫಿಟ್‍ನೆಸ್ ಖಚಿತಪಡಿಸಿದ ನಂತರ ವಲಿಯಪರಂಬ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗುವುದು ಎಂದು ಶಾಸಕ ಎಂ.ರಾಜಗೋಪಾಲನ್ ತಿಳಿಸಿದರು.
ರಾಜ್ಯದಲ್ಲೇ ಪ್ರಥಮ ಬಾರಿಗೆ ಶಾಸಕರೊಬ್ಬರ ಸ್ಥಳೀಯ ಅಭಿವೃದ್ಧಿ ಮೊತ್ತ ಬಳಸಿ ನಿರ್ಮಿಸಲಾಗುವ ಪ್ರಥಮ ಸಂಚಾರಿ ಬೋಟು ಇದು ಎಂಬುದೂ ಗಮನಾರ್ಹವಾಗಿದೆ. ಮಾಡಕ್ಕಾಲ್ ತೂಗು ಸೇತುವೆ ಮುರಿದುಬಿದ್ದ ನಂತರ ಈ ಪ್ರದೇಶಗಳಲ್ಲಿ ಸಂಚಾರಕ್ಕೆ ಕಳೆದ ಅನೇಕ ವರ್ಷಗಳಿಂದ ಹೆಚ್ಚಿನ ಸಮಸ್ಯೆ ಅನುಭವಿಸಬೇಕಾಗಿ ಬಂದಿತ್ತು. 2018 ಜುಲೈ 7ರಂದು ಈ ಸಂಬಂಧ ಶಾಸಕ ಎಂ.ರಾಜಗೋಪಾಲನ್, ಅಂದಿನ ಜಿಲ್ಲಾಧಿಕಾರಿ ಜೀವನ್ ಬಾಬು ಅವರ ನೇತೃತ್ವದಲ್ಲಿ ಜನಪ್ರತಿನಿಧಿಗಳ, ರಾಜಕೀಯ ಪಕ್ಷಗಳ ಪ್ರತಿನಿಧಿಗಳ, ಸ್ಥಳೀಯ ನಿವಾಸಿಗಳ ಸಭೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದು ಬೋಟು ಸಂಚಾರ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು.