ಕಾಸರಗೋಡು: ಅಬಕಾರಿ ಇಲಾಖೆಯ ಜನಜಾಗೃತಿ ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನೆ ಪೆÇಯಿನಾಚಿ ಭಾರತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು. ಪೆÇಯಿನಾಚಿ ರೆಸಿಡೆಂಟ್ ಅಸೋಸಿಯೇಶನ್ ಮತ್ತು ಠಾಗೋರ್ ಪಬ್ಲಿಕ್ ಲೈಬ್ರರಿ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು. ಚೆಮ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಹೈಜಾ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪ್ರಧಾನ ಭಾಷಣ ಮಾಡಿದರು. ಅಬಕಾರಿ ಪ್ರಿವೆಂಟೀವ್ ಅಧಿಕಾರಿ ಎನ್.ಜಿ.ರಘೂನಾಥನ್ ವಿಮುಕ್ತಿ ಸಂದೇಶ ನೀಡಿದರು. ವಿವಿಧ ಗಣ್ಯರು ಉಪಸ್ಥಿತರಿದ್ದರು.