ಅನಾರೋಗ್ಯಕರ ಜೀವನಶೈಲಿಯು ಅನೇಕ ಆರೋಗ್ಯ ಸಮಸ್ಯೆಗಳನ್ನ ಕೈಬೀಸಿ ಕರೆಯುತ್ತದೆ. ಅವುಗಳಲ್ಲಿ ಒಂದು ಅಧಿಕ ಕೊಲೆಸ್ಟ್ರಾಲ್. ಇಂದಿನ ಕಾಲದಲ್ಲಿ ಹೆಚ್ಚಿನವರನ್ನು ಕಾಡುವ ಸಮಸ್ಯೆಯಾಗಿದ್ದು, ನಿಮ್ಮ ಆಹಾರವು ಅನಾರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದ್ದಾಗ ಮತ್ತು ಜಡ ಜೀವನದಿಂದಾಗಿ ಉದ್ಭವಿಸುತ್ತದೆ.
ಆದರೆ ಯಾರೂ ಇದಕ್ಕೆ ಲಕ್ಷ್ಯ ನೀಡುವುದಿಲ್ಲ. ಕಾಲಾನಂತರದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಆದ್ದರಿಂದ ಹೈಕೊಲೆಸ್ಟ್ರಾಲ್ ಸಮಸ್ಯೆಯನ್ನು ಮೊದಲೇ ಗುರುತಿಸುವುದು ಮುಖ್ಯ. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.ಹೈ ಕೊಲೆಸ್ಟ್ರಾಲ್ ಸಮಸ್ಯೆಯಿದೆ ಎಂಬುದನ್ನು ಕಾಲುಗಳು ಹೇಗೆ ಹೇಳುತ್ತವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಕೊಲೆಸ್ಟ್ರಾಲ್ ಬಗ್ಗೆ ಅತ್ಯಂತ ಅಪಾಯಕಾರಿ ವಿಷಯವೆಂದರೆ ಅದು ಅಪಾಯಕಾರಿ ಮಟ್ಟ ತಲುಪುವವರೆಗೆ ಮತ್ತು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವವರೆಗೂ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಇದನ್ನು ಪತ್ತೆಹಚ್ಚಲು ಮತ್ತು ತಡೆಯಲು ಇರುವ ಏಕೈಕ ಮಾರ್ಗವೆಂದರೆ ನಿಯಮಿತ ರಕ್ತ ತಪಾಸಣೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವು ತೀವ್ರ ಮಟ್ಟಕ್ಕೆ ಏರಿದಾಗ, ಅದು ನಿಮ್ಮ ಕಾಲುಗಳ ಅಕಿಲ್ಸ್ ಸ್ನಾಯುರಜ್ಜು ಮೇಲೆ ಪರಿಣಾಮ ಬೀರಲು ಆರಂಭಿಸುತ್ತದೆ. ಇದು, ನಿಮ್ಮ ಕಾಲುಗಳಲ್ಲಿ ಕೆಲವು ಲಕ್ಷಣಗಳಿಗೆ ಕಾರಣವಾಗಬಹುದು. ಆ ಲಕ್ಷಣಗಳು ಹೀಗಿವೆ:
1. ಕಾಲುಗಳಲ್ಲಿ ನೋವು: ಕೊಲೆಸ್ಟ್ರಾಲ್ ಹೆಚ್ಚಾದಾಗ, ರಕ್ತವು ನಿಮ್ಮ ಕೆಳಗಿನ ಭಾಗವನ್ನು ತಲುಪುವುದಿಲ್ಲ. ಇದು ನಿಮ್ಮ ಕಾಲುಗಳಿಗೆ ಭಾರವಾದ ಮತ್ತು ದಣಿದ ಅನುಭವವನ್ನು ಉಂಟುಮಾಡಬಹುದು. ಹೈ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ಹೆಚ್ಚಿನ ಜನರು ಪಾದಗಳಲ್ಲಿ ಸುಡುವ ನೋವಿನ ಬಗ್ಗೆ ಹೇಳುತ್ತಾರೆ. ತೊಡೆಯ ಅಥವಾ ಗಂಟುಗಳಲ್ಲಿ ಸೇರಿದಂತೆ ಕಾಲಿನ ಯಾವುದೇ ಭಾಗದಲ್ಲಿ ನೋವು ಅನುಭವಿಸಬಹುದು. ಈ ನೋವು ಮುಖ್ಯವಾಗಿ ವ್ಯಕ್ತಿ ಸ್ವಲ್ಪ ನಡೆದರೂ ಹುಟ್ಟಿಕೊಳ್ಳಬಹುದು.
2. ಕಾಲಿನ ಸೆಳೆತ: ನಿದ್ದೆ ಮಾಡುವಾಗ ತೀವ್ರವಾದ ಕಾಲಿನ ಸೆಳೆತವು ಅಧಿಕ ಕೊಲೆಸ್ಟ್ರಾಲ್ ಮಟ್ಟವು ಕೆಳ ಅಂಗಗಳನ್ನು ಹಾನಿ ಮಾಡುತ್ತಿದೆ ಎಂಬುದರ ಇನ್ನೊಂದು ಸಾಮಾನ್ಯ ಲಕ್ಷಣವಾಗಿದೆ. ಸೆಳೆತವನ್ನು ಹೆಚ್ಚಾಗಿ ಹಿಮ್ಮಡಿ, ಮುಂಗಾಲು ಅಥವಾ ಕಾಲ್ಬೆರಳುಗಳಲ್ಲಿ ಅನುಭವಿಸಬಹುದು. ರಾತ್ರಿ ಮಲಗುವಾಗ ಈ ಪರಿಸ್ಥಿತಿ ಹದಗೆಡುತ್ತದೆ. ಗುರುತ್ವಾಕರ್ಷಣೆಯ ಬಲದಿಂದ ರಕ್ತವು ಕೆಳಮುಖವಾಗಿ ಹರಿಯಲು ಸಹಾಯ ಮಾಡುವುದು ಇದಕ್ಕೆ ನೀಡುವ ಪರಿಹಾರವಾಗಿದೆ. ಅದಕ್ಕಾಗಿಯೇ ಎದ್ದು ಓಡಾಡುವುದು ಅಥವಾ ಹಾಸಿಗೆಯಿಂದ ಕಾಲನ್ನು ಕೆಳಕ್ಕೆ ನೇತುಬಿಡುವುದನ್ನು ಮಾಡುತ್ತೇವೆ.3. ಚರ್ಮ ಮತ್ತು ಉಗುರಿನ ಬಣ್ಣದಲ್ಲಿ ಬದಲಾವಣೆ: ರಕ್ತದ ಹರಿವು ಕಡಿಮೆಯಾಗುವುದರಿಂದ ಸಹ ಕಾಲ್ಬೆರಳ ಉಗುರುಗಳು ಮತ್ತು ಚರ್ಮದ ಬಣ್ಣ ಬದಲಾಗಬಹುದು. ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸುವ ರಕ್ತದ ಹರಿವು ಕಡಿಮೆಯಾಗಿರುವುದರಿಂದ ಕಾಲಿನ ಜೀವಕೋಶಗಳಿಗೆ ಸರಿಯಾದ ಪೋಷಣೆ ಸಿಗದೇ ಇರುವುದರಿಂದ ಬೆರಳಿನ ಬಣ್ಣ ಬದಲಾಗಬಹುದು, ಕಾಲ್ಬೆರಳ ಉಗುರು ದಪ್ಪವಾಗಬಹುದು ಅಥವಾ ಉಗುರುಗಳು ನಿಧಾನವಾಗಿ ಬೆಳೆಯಬಹುದು.