ತಿರುವನಂತಪುರಂ: ರಾಜ್ಯ ಸರ್ಕಾರ ಘೋಷಿಸಿರುವ 30 ಅಂತರ್ ವಿಶ್ವವಿದ್ಯಾಲಯ ಸ್ವಾಯತ್ತ ಅಧ್ಯಯನ ಕೇಂದ್ರಗಳಲ್ಲಿ ಒಂದಾಗಿ ಭೌತಶಾಸ್ತ್ರಜ್ಞ ಡಾ. ತನು ಪದ್ಮನಾಭನ್ ಅವರ ಹೆಸರಿನಲ್ಲಿ ಸ್ಥಾಪಿಸಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ತಿಳಿಸಿದ್ದಾರೆ. ಕೇರಳ ವಿಶ್ವವಿದ್ಯಾಲಯದಲ್ಲಿ ಈ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದು. ವಿಶ್ವವಿದ್ಯಾನಿಲಯದಲ್ಲಿ ಸ್ಟೂಡೆಂಟ್ ಲ್ಯೆಫ್ ಸ್ಯೆಕಲ್ ಮ್ಯಾನೇಜ್ಮೆಂಟ್ ಸಿಸ್ಟಂ ಮತ್ತು ಗ್ರಂಥಾಲಯದಲ್ಲಿ ಡಿಜಿಟಲ್ ಇನ್ನೋವೇಟಿವ್ ಸೇವೆಗಳನ್ನು ಇಂದು ಉದ್ಘಾಟಿಸಿ ಬಳಿಕ ನಡೆದ ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ಕೇರಳ ವಿಶ್ವವಿದ್ಯಾನಿಲಯದ ಅಂತರ್-ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರವನ್ನು ವಿಶ್ವ ದರ್ಜೆಯ ಸಂಸ್ಥೆಯಾಗಿ ರೂಪಿಸಲಾಗಿದೆ. ಜಗತ್ತಿನ ಇತರ ಮಾದರಿಗಳಿಗಿಂತ ಭಿನ್ನವಾದ ಜ್ಞಾನ ಸಮಾಜವನ್ನು ಸೃಷ್ಟಿಸುವುದು ಕೇರಳದ ಲಕ್ಷ್ಯವಾಗಿದೆ. ಇದು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಉನ್ನತ ಶಿಕ್ಷಣ ಪರಿಷತ್ತು ಜಾರಿಗೆ ತಂದಿರುವ ನವಕೇರಳ ಪೋಸ್ಟ್‌ಡಾಕ್ಟರಲ್ ಫೆಲೋಶಿಪ್‌ಗಳು ಅದರ ಭಾಗವಾಗಿದೆ ಎಂದು ಸಚಿವರು ಹೇಳಿದರು.
ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಥಿಕ ಬೆಂಬಲವನ್ನು ಒದಗಿಸುವ ಸರ್ಕಾರದ ದೃಷ್ಟಿ ನವಕೇರಳ ಪೋಸ್ಟ್‌ಡಾಕ್ಟರಲ್ ಫೆಲೋಶಿಪ್‌ಗಳ ಹಿಂದೆ ಇದೆ ಎಂದು ಅವರು ಹೇಳಿದರು. ಕೇರಳದ ಹೊರಗಿನ ಜನರನ್ನು ಆಕರ್ಷಿಸುವ ಸಂಶೋಧನಾ ಸೌಲಭ್ಯಗಳನ್ನು ಇಲ್ಲಿ ಸ್ಥಾಪಿಸಲಾಗುವುದು. ಉನ್ನತ ಶಿಕ್ಷಣ ಪಡೆದವರ ‘ಬ್ರೇನ್ ಡ್ರೈನ್’ ಅಂತ್ಯಗೊಳಿಸಿ ‘ಬ್ರೇನ್ ಗೇನ್’ ಸೃಷ್ಟಿಸುತ್ತೇವೆ’ ಎಂದು ಸಚಿವೆ ಆರ್. ಬಿಂದು ಹೇಳಿದರು.