HEALTH TIPS

ಆನ್​ಲೈನ್​ ಮೂಲಕವೇ ರಿಜಿಸ್ಟರ್​ ಮ್ಯಾರೇಜ್​ ಆದ ವಧು: ಕೇರಳದಲ್ಲೇ ಇದು ಮೊದಲು

                ಪುನಲೂರ್​: ಕೇರಳದ ಪುನಲೂರ್​ನಲ್ಲಿ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಇಂದು (ಅ.23) ಬೆಳಗ್ಗೆ ಆಗಮಿಸಿದ ವಧು ಧನ್ಯಾ ಮಾರ್ಟಿನ್​, ಉಕ್ರೇನ್​ನಲ್ಲಿರುವ ವರ ಜೀವನ್​ ಕುಮಾರ್​ ಜತೆ ಕಾನೂನುಬದ್ಧವಾಗಿ ಆನ್​ಲೈನ್​ ಮೂಲಕವೇ ಮದುವೆ ಆಗುವ ಮೂಲಕ ಸುದ್ದಿಯಾಗಿದ್ದಾರೆ.

          ರಾಜ್ಯದಲ್ಲಿ ಡಿಜಿಟಲ್​ ಸೌಲಭ್ಯದೊಂದಿಗೆ ನೆರವೇರಿದ ಮೊದಲನೇ ಮದುವೆ ಇದಾಗಿದೆ. ಸಬ್​ ರಿಜಿಸ್ಟ್ರಾರ್​ ಟಿ.ಎಂ. ಫಿರೋಜ್​ ನೇತೃತ್ವದಲ್ಲಿ ಈ ವಿವಾಹ ಕಾರ್ಯಕ್ರಮ ಅಚ್ಚಕಟ್ಟಾಗಿ ನೆರವೇರಿದೆ. ಸಮಾರಂಭದ ಬಳಿಕ ಮದುವೆ ಪ್ರಮಾಣ ಪತ್ರವನ್ನು ತಕ್ಷಣ ವಧುವಿಗೆ ಹಸ್ತಾಂತರಿಸಲಾಯಿತು.

ಅಂದಹಾಗೆ ವರ ಜೀವನ್​ ಕುಮಾರ್​ ಪುನಲೂರ್​ ನಿವಾಸಿ. ಕೋವಿಡ್​ ನಿರ್ಬಂಧಗಳ ಹಿನ್ನೆಲೆಯಲ್ಲಿ ಉಕ್ರೇನ್​ನಿಂದ ಕೇರಳಕ್ಕೆ ಬರಲು ಸಾಧ್ಯವಾಗಲಿಲ್ಲ. ವಧು ಧನ್ಯಾ ತಿರುವಂತಪುರಂನ ಕಝಕ್ಕೂಟಂ ಮೂಲದ ನಿವಾಸಿ. ವಿಶೇಷ ಮದುವೆ ಕಾಯ್ದೆ ಪ್ರಕಾರ ತಮ್ಮ ಮದುವೆಯನ್ನು ನೋಂದಣಿ ಮಾಡಲು ಕಳೆದ ಮಾರ್ಚ್​ನಲ್ಲೇ ಧನ್ಯಾ ಮತ್ತು ಜೀವನ್​ ಕುಮಾರ್​ ಅರ್ಜಿ ಸಲ್ಲಿಸಿದ್ದರು. ಆದರೆ, ನಿಗದಿತ ಸಮಯಕ್ಕೆ ಜೀವನ್​ ಕುಮಾರ್​ ಕೇರಳಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಕೇರಳ ಹೈಕೋರ್ಟ್​ ಮೆಟ್ಟಿಲೇರಿದ್ದರು.

              ಅರ್ಜಿಯ ಸಿಂಧುತ್ವವನ್ನು ವಿಸ್ತರಿಸಬೇಕು ಮತ್ತು ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಎರಡೂ ಕುಟುಂಬಗಳ ಉಪಸ್ಥಿತಿಯ ನಿಯಮವನ್ನು ತಪ್ಪಿಸುವ ಮೂಲಕ ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆ ನೆರವೇರಿಸಬೇಕೆಂದು ಅರ್ಜಿಯಲ್ಲಿ ಕೇರಳ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ವಿದೇಶಾಂಗ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಇಲಾಖೆ ಅಭಿಪ್ರಾಯಗಳನ್ನು ಪರಿಗಣಿಸಿ, ಕೋರ್ಟ್​ ವಧು-ವರರ ಪರ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಆನ್​ಲೈನ್​ ಸೌಲಭ್ಯ ಮೂಲಕ ಇಬ್ಬರು ವಿವಾಹ ಕಾರ್ಯ ನೇರವೇರಿದ್ದು, ರಾಜ್ಯದಲ್ಲೇ ಮೊದಲ ಆನ್​ಲೈನ್​ ಮದುವೆಗೆ ಧನ್ಯಾ ಮತ್ತು ಜೀವನ್​ ಕುಮಾರ್​ ಸಾಕ್ಷಿಯಾಗಿದ್ದಾರೆ.

          ವರನ ತಂದೆ ದೇವರಾಜನ್​ ತಂದೆಯ ಪರವಾಗಿ ಸಹಿ ಹಾಕಿದರು. ಜಿಲ್ಲಾ ರಿಸ್ಟ್ರಾರ್​ ಸಿ ಕೆ ಜಾನ್ಸನ್​ ಈ ವಿಶೇಷ ಸಮಾರಂಭಕ್ಕೆ ಸಾಕ್ಷಿಯಾದರು. ಗೂಗಲ್​ ಮೀಟ್​ ಎಂಬ ಆನ್​ಲೈನ್​ ವೇದಿಕೆ ಮೂಲಕ ಈ ವಿನೂತನ ಮದುವೆ ಸಮಾರಂಭ ನೆರವೇರಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries