ಪೆರ್ಲ: ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ "ಗಾಂಧೀ ಸೃತಿ ಯಾತ್ರೆ" ಅಡ್ಕಸ್ಥಳದಿಂದ ಆರಂಭಗೊಂಡು ಪೆರ್ಲ ಪೇಟೆಯಲ್ಲಿ ಸಂಪನ್ನಗೊಂಡಿತು.
ಅಡ್ಕಸ್ಥಳದಿಂದ ಹಿರಿಯ ಕಾಂಗ್ರೆಸ್ ನೇತಾರ, ರಾಜಕೀಯ ರಂಗದ ಮುತ್ಸದ್ಧಿ ಸಿ.ಸಂಜೀವ ರೈ ಕಾಟುಕುಕ್ಕೆ ಕಾರ್ಯಕ್ರಮ ಉದ್ಘಾಟಿಸಿ ಜಾಥಾ ಪತಾಕೆಯನ್ನು ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ಎಸ್.ಗಾಂಭೀರ್ ಅವರಿಗೆ ನೀಡಿ ಜಾಥಾಕ್ಕೆ ಚಾಲನೆ ನೀಡಿದರು. ಮಂಡಲ ಕಾಂಗ್ರೆಸ್, ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ವಾರ್ಡ್ ಮಟ್ಟದ ಬೂತ್ ಸಮಿತಿ ಕಾರ್ಯಕರ್ತರು ಪಾದ ಯಾತ್ರೆಗೆ ನೇತೃತ್ವ ನೀಡಿದರು. ಪೆರ್ಲ ಗಾಂಧೀ ಕಟ್ಟೆಯ ಸಮೀಪ ನಡೆದ ಕಾರ್ಯಕ್ರಮದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಸಮಾರೋಪ ಭಾಷಣಗೈದರು. ಹಿರಿಯ ಕಾಂಗ್ರೆಸ್ ನೇತಾರ ಮಿತ್ತೂರು ಪುರುಷೋತ್ತಮ ಭಟ್, ರವೀಂದ್ರನಾಥ ನಾಯಕ್ ಶೇಣಿ, ನ್ಯಾಯವಾದಿ ಸುಧಾಕರ ರೈ, ವಿಲ್ಫ್ರೆಡ್ ಡಿಸೋಜ, ಅಬ್ದುಲ್ಲ ಕೆ, ರಾಧಾಕೃಷ್ಣ ನಾಯಕ್ ಶೇಣಿ, ಜಯಶ್ರೀ ಕುಲಾಲ್, ಲೋಕನಾಥ ರೈ ಕಾಟುಕುಕ್ಕೆ, ಪ್ರಸಾದ್ ರೈ, ಎಂ.ಕೆ.ರಮೇಶ್, ನಿಸಾರ್, ಹನೀಫ್ ಕಾಟುಕುಕ್ಕೆ ಮೊದಲಾದವರು ಪಾಲ್ಗೊಂಡರು.