ಕಾಸರಗೋಡು: ಸೇವಾ ಭಾರತಿಯ ದೀನ ಬಂಧು ಚಾರಿಟೇಬಲ್ ಟ್ರಸ್ಟ್‍ನ ನೂತನ ಕಟ್ಟಡ ನಿರ್ಮಾಣದ ಪ್ರಯುಕ್ತ ನಡೆಸುವ ಮನೆ ಮನೆ ಭಜನಾ ಅಭಿಯಾನ ಪ್ರಾರಂಭಗೊಂಡಿತು.
ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದಲ್ಲಿ ಭವನ ಸಂಸ್ಥಾಪಕ ವಾಮನ್ ರಾವ್- ಸಂದ್ಯಾ ರಾಣಿ ದಂಪತಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು. ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಉಮೇಶ್, ನಾರಾಯಣ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಜನಾ ಸಾಮ್ರಾಟ್ ಮೋಹನ್ ಆಚಾರ್ಯ ಪೂಳ್ಕೂರು, ಯುವ ಭರವಸೆಯ ಗಾಯಕ ಮೇಘರಾಜ್, ವಸಂತ ಕೆರೆಮನೆ, ಜಗದೀಶ್ ಕೂಡ್ಲು ಮತ್ತು ಬಳಗವು ಭÀಜನೆಯನ್ನು ಅವಿಸ್ಮರಣೀಯವಾಗಿಸಿದರು. ಮೋಹನ್ ಆಚಾರ್ಯ ಪೂಳ್ಕೂರು ಹಾಗೂ ಮೇಘರಾಜ್ ಪುಳ್ಕೂರು ಅವರನ್ನು ಕನ್ನಡ ಭವನದ ಪರವಾಗಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಪ್ರತಿಭಾ ಪುರಸ್ಕಾರ, ಪ್ರಮಾಣ ಪತ್ರ ನೀಡಿ ಗೌರವಿಸಿತು. ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆ ಭಾಗವಹಿಸಿ ಪುಸ್ತಕ ಪ್ರದರ್ಶನ ಮತ್ತು ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಜಗದೀಶ್ ಕೂಡ್ಲು ಕೆ. ಕಾರ್ಯಕ್ರಮ ನಿರೂಪಿಸಿದರು.