ಕುಂಬಳೆ: ಲಾಕ್ ಡೌನ್ ರೀಯಾಯಿತಿ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬಾಚರಣೆಯ ಅಂಗವಾಗಿ ಸಮನ್ವಯದ ಅಂತರ್ ರಾಜ್ಯ ಕಲೋತ್ಸವ "ಭಾರತ್ ಉತ್ಸವ್ 2" ಕುಂಬಳೆಯಲ್ಲಿ ನಡೆಯಲಿದೆ.
ಶಾಲಾ ಕಾಲೇಜು, ವಿಶ್ವ ವಿದ್ಯಾನಿಲಯಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಕೇಂದ್ರ-ರಾಜ್ಯ ನೌಕರರು, ಪತ್ರಕರ್ತರು, ವೈದ್ಯರು, ನ್ಯಾಯವಾದಿಗಳು, ಎಂಜಿನಿಯರ್ಸ್, ದಾದಿಗಳು, ಬ್ಯಾಂಕ್, ಜೀವವಿಮಾ ನಿಗಮ, ಸಹಕಾರೀ ರಂಗದ ನೌಕರರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗಾಗಿ ವಿವಿ|ಧ ಕಲಾ ಸಾಹಿತ್ಯ ಸ್ಪರ್ಧೆಗಳು ಕ್ಯಾಟಗರಿ ಹಂತದಲ್ಲಿ ನಡೆಯಲಿದೆ. ನ.4 ರಂದು ಬೆಳಿಗ್ಗೆ 9.30ಕ್ಕೆ ಕುಂಬಳೆ ಸಿಂಡಿಕೇಟ್ ಬ್ಯಾಂಕ್ ಮೇಲ್ಗಡೆಯ ಪೈ ಸಭಾಂಗಣದಲ್ಲಿ ಭಾಷಣ, ಚಿತ್ರ ರಚನೆ, ಭರತನಾಟ್ಯ, ಭಜನೆ(ಪುರುಷ-ಮಹಿಳಾ ತಂಡಗಳು)ಮಾಪಿಳ್ಳಪ್ಪಾಟ್, ಬ್ಯಾರಿ ಹಾಡುಗಳ ಸ್ಪರ್ಧೆಗಳು ನಡೆಯಲಿದೆ. ನಂತರದ ದಿನಗಳಲ್ಲಿ ಸಿನಿಮಾ ಹಾಡು, ಭಕ್ತಿಗೀತೆಗಳ ಗಾಯನ, ಶಾಸ್ತ್ರೀಯ ಸಂಗೀತ, ಕಥೆ-ಕವಿತಾ ರಚನೆಗಳು, ಮಿಮಿಕ್ರಿ, ಕೊಡವ ನೃತ್ಯ, ಒಪ್ಪನ ನೃತ್ಯ, ಏಕ ಪಾತ್ರಾಭಿನಯ, ಪಿಲ್ಮ್ ಡ್ಯಾನ್ಸ್, ಛಧ್ಮವೇಷ ಸ್ಪರ್ಧೆಗಳು ಕೋವಿಡ್ ನಿಯಮಾನುಸಾರ ನಡೆಯಲಿದೆ. 8, 15, 20, 50 ವರ್ಷ ಮೇಲ್ಪಟ್ಟ ಹರೆಯದವರು ಪ್ರಸ್ತುತ ಸ್ಫರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಭಾಷಣ, ಸಿನಿಮಾ ಹಾಡು, ಕತೆ, ಕವಿತಾ ರಚನೆ, ಸ್ಪರ್ಧೆಗಳು ವಿವಿಧ ಭಾಷೆಗಳಲ್ಲಿ ನಡೆಯಲಿದೆ. ಭಾಗವಹಿಸುವ ಆಸಕ್ತರು ಹೆಸರು, ವಿಳಾಸವನ್ನು ಬಯೋಡಾಟಾದೊಂದಿಗೆ ಒಂದು ವಾರದೊಳಗೆ ರೇಣುಕ.ಡಿ., ಯೋಗೀಶ್ ಟವರ್, ಬದಿಯಡ್ಕ ರಸ್ತೆ, ಕುಂಬಳೆ ಅಂಚೆ. 671321 ಎಂಬ ವಿಳಾಸಕ್ಕೆ ಕಳಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9133175611 ಸಂಖ್ಯೆಗೆ ಸಂಪರ್ಕಿಸಬಹುದು.