ಹಲ್ದ್‌ವಾನಿ : ಮದುವೆ ಎಂಬ ಸಣ್ಣ ಸ್ವಾರ್ಥಕ್ಕಾಗಿ ಧಾರ್ಮಿಕ ಮತಾಂತರ ಮಾಡಲಾಗುತ್ತಿದೆ. ಇದು ತಪ್ಪು,' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಉತ್ತರಾಖಂಡದ ಹಲ್ದ್‌ವಾನಿ ಎಂಬಲ್ಲಿ ಭಾನುವಾರ ಮಾತನಾಡಿರುವ ಅವರು,
'ಮತಾಂತರ ಹೇಗೆ ನಡೆಯುತ್ತದೆ? ನಮ್ಮ ಹೆಣ್ಣುಮಕ್ಕಳು ಮತ್ತು ಹುಡುಗರು ಇತರ ಧರ್ಮಗಳಿಗೆ ಹೇಗೆ ಮತಾಂತರಗೊಳ್ಳುತ್ತಿದ್ದಾರೆ? ಮದುವೆ ಎಂಬ ಸಣ್ಣ ಸ್ವಾರ್ಥಕ್ಕಾಗಿ ಮತಾಂತರ ನಡೆಯುತ್ತಿದೆ. ಇದು ತಪ್ಪು' ಎಂದು ಅವರು ಹೇಳಿದರು.
'ನಾವು ನಮ್ಮ ಮಕ್ಕಳಲ್ಲಿ ಆತ್ಮಾಭಿಮಾನ ಮತ್ತು ನಮ್ಮ ಧರ್ಮದ ಕುರಿತು ಗೌರವ ಮೂಡುವಂತೆ ಮಾಡಬೇಬೇಕು,' ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಸೋಮವಾರ ವರದಿ ಮಾಡಿದೆ.