HEALTH TIPS

ವಿವಾದಿತ ಕೃಷಿ ಕಾನೂನುಗಳ ಬಗ್ಗೆ ಮನಬಿಚ್ಚಿ ಮಾತಾಡಿದ ಪ್ರಧಾನಿ ಮೋದಿ

               ನವದೆಹಲಿ: ರೈತ ಸಂಘಟನೆಗಳು ಮತ್ತು ಕಾಂಗ್ರೆಸ್​ ಪಕ್ಷ ವಿರೋಧಿಸುತ್ತಿರುವ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯವಾಗಿ ಮೌನ ತಾಳುತ್ತಾ ಬಂದಿದ್ದಾರೆ. ಇದೀಗ ಮ್ಯಾಗಜೀನ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.

           ತಮ್ಮ ಸರ್ಕಾರ ರೈತರನ್ನು ಸಶಕ್ತಗೊಳಿಸುವಲ್ಲಿ ಕಂಕಣಬದ್ಧವಾಗಿದೆ ಎಂದಿರುವ ಮೋದಿ, ಈವರೆಗೆ ವಿವಾದಿತ ಕೃಷಿ ಕಾನುನುಗಳಲ್ಲಿ ನಿರ್ದಿಷ್ಟವಾಗಿ ಯಾವ ಅಂಶವನ್ನು ಬದಲಿಸಬೇಕೆಂದು ಪ್ರತಿಭಟನಾನಿರತರು ಬೆಟ್ಟು ಮಾಡಿ ತೋರಿಸಿಲ್ಲ ಎಂದಿದ್ದಾರೆ. ಯಾವುದೇ ಪಕ್ಷದ ಹೆಸರು ತೆಗೆದುಕೊಳ್ಳದೆ, ರೈತಪರ ಸುಧಾರಣೆಗಳನ್ನು ವಿರೋಧಿಸುತ್ತಿರುವವರನ್ನು ನೋಡಿದರೆ ಬೌದ್ಧಿಕ ಅಪ್ರಾಮಾಣಿಕತೆ ಮತ್ತು 'ರಾಜನೈತಿಕ ಧೋಖಾಧಡಿ' ಎಂದರೆ ಏನೆಂದು ಗೊತ್ತಾಗುತ್ತದೆ ಎಂದಿದ್ದಾರೆ.

          ಭಾರತದಂಥ ದೊಡ್ಡ ರಾಷ್ಟ್ರದಲ್ಲಿ ಶೇಕಡ 100ರಷ್ಟು ಜನರಿಗೆ ಒಪ್ಪಿಗೆಯಾಗಬಲ್ಲಂಥ ನಿರ್ಧಾರವನ್ನು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿರುವ ಮೋದಿ, 'ತಮ್ಮ ಪಕ್ಷ ಮತ್ತೆ ಗೆಲ್ಲುತ್ತದೆಯಾ ಎಂದು ನೋಡಿಕೊಂಡು ಸರ್ಕಾರ ಆಳುವ ಪ್ರತೀತಿ ಇದೆ. ಆದರೆ, ದೇಶ ಗೆಲ್ಲುವಂತೆ ಸರ್ಕಾರ ನಡೆಸುವ ಉದ್ದೇಶ ನನ್ನದು. ನನ್ನ ನಿರ್ಧಾರಗಳು ಹೇಗೆ ಅತ್ಯಂತ ಬಲಹೀನ ಅಥವಾ ಬಡ ವ್ಯಕ್ತಿಗೆ ಉಪಯುಕ್ತ ಅಥವಾ ಹಾನಿಕಾರಕವಾಗಬಲ್ಲದು ಎಂಬ ಗಾಂಧೀಜಿಯ ಮಾನದಂಡದಂತೆ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ.

             ಕೃಷಿ ಕಾನೂನುಗಳ ಬಗೆಗಿನ ವಿರೋಧದ ಬಗ್ಗೆ ಮಾತನಾಡಿದ ಮೋದಿ, 'ನಾವು ಸಣ್ಣ ರೈತರನ್ನು ಸಶಕ್ತೀಕರಿಸಲು ಬದ್ಧರಾಗಿದ್ದೇವೆ. ಕೃಷಿ ಕಾನೂನಿನಲ್ಲಿ ಯಾವ ಅಂಶದ ಬಗ್ಗೆ ಒಪ್ಪಿಗೆ ಇಲ್ಲವೋ ಆ ವಿಚಾರಗಳನ್ನು ಕುಳಿತು ಚರ್ಚಿಸಲು ಸಿದ್ಧವಿದ್ದೇವೆ ಎಂದು ನಮ್ಮ ಸರ್ಕಾರ ಮೊದಲನೇ ದಿನದಿಂದ ಹೇಳುತ್ತಾ ಬಂದಿದೆ. ಹಲವು ಸಭೆಗಳು ನಡೆದಿವೆ. ಆದರೆ ಇಲ್ಲೀವರೆಗೆ ಯಾರೊಬ್ಬರೂ ಒಪ್ಪಿಗೆಯಿಲ್ಲದ ನಿರ್ದಿಷ್ಟ ಅಂಶದ ಬಗ್ಗೆ ತಿಳಿಸಿಲ್ಲ' ಎಂದಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries