ಬದಿಯಡ್ಕ: ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಗಡಿನಾಡ ಯಕ್ಷಗಾನ ಅಕಾಡೆಮಿ ಕಾಸರಗೋಡು ಇವರ ಜಂಟಿ ಆಶ್ರಯದಲ್ಲಿ ಶ್ರೀಕ್ಷೇತ್ರ ಕೊಲ್ಲಂಗಾನದಲ್ಲಿ ಇಂದು ಹಿರಿಯರಿಗೆ ಅಭಿನಂದನೆ ಹಾಗೂ ಕೊರೋನಾಸ್ತ್ರ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಇಂದು ರಾತ್ರಿ 8ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕೊಲ್ಲಂಗಾನ ಶ್ರೀಕ್ಷೇತ್ರದ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಆಶೀರ್ವಚನ ನೀಡುವರು.ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸುವರು. ರವೀಶ ತಂತ್ರಿ ಕುಂಟಾರು ಉದ್ಘಾಟಿಸುವರು. ಮಾಧ್ಯಮ ಪ್ರಶಸ್ತಿ ಪುರಸ್ಕøತ ಪತ್ರಕರ್ತ ಅಚ್ಯುತ ಚೇವಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಸಾಮಾಜಿಕ, ಧಾರ್ಮಿಕ ಮುಖಂಡ ಚಂದ್ರಹಾಸ ಮಾಸ್ತರ್, ಸಾಮಾಜಿಕ ಕಾರ್ಯಕರ್ತ ಜಯಾನಂದ ಕುಳ ಶುಭಾಶಂಸನೆಗೈಯ್ಯುವರು. ಈ ಸಂದರ್ಭ ಮಾತೃಶ್ರೀ ಶಾರದಾ ಅನಂತಪದ್ಮನಾಭ ಉಪಾಧ್ಯಾಯರಿಗೆ ಅಭಿನಂದನೆ ನಡೆಯಲಿದೆ. ಗಡಿನಾಡ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ಯಕ್ಷಗುರು ಜಯರಾಮ ಪಾಟಾಳಿ ಪಡುಮಲೆ ಉಪಸ್ಥಿತರಿರುವರು. ಬಳಿಕ ಯುವ ಕಲಾವಿದರಿಂದ ಕೊರೋನಾಸ್ತ್ರ ಯಕ್ಷಗಾನ ಪ್ರದರ್ಶನ ನಡೆಯಲಿದೆ.