ಕೋಲ್ಕತ್ತ: 'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋವಿಡ್ ಲಸಿಕಾ ಅಭಿಯಾನದ ಅಂಕಿ ಅಂಶಗಳಿಂದ ಜನರನ್ನು ಗೊಂದಲ ಮೂಡಿಸುತ್ತಿದೆ' ಎಂದು ಕಾಂಗ್ರೆಸ್ ನಾಯಕ ಅಧೀರ್ ಚೌಧರಿ ಶನಿವಾರ ಟೀಕಿಸಿದ್ದಾರೆ.
100 ಕೋಟಿ ಜನರಿಗೇ ಲಸಿಕೆ ನೀಡಲಾಗಿದೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಅಧೀರ್ ಆರೋಪಿಸಿದರು.
'100 ಕೋಟಿ ಡೋಸ್ ಲಸಿಕೆ ನೀಡಿದ್ದ ಸಂದರ್ಭದಲ್ಲಿ 100 ಸ್ಥಳಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಈ ಮೂಲಕ ಪ್ರಧಾನಿ 100 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ ಎಂಬ ಸಂದೇಶ ರವಾನಿಸಲು ಯತ್ನಿಸುತ್ತಿದ್ದಾರೆ. ಆದರೆ ಇದು ವಾಸ್ತವ ಸ್ಥಿತಿಯಲ್ಲ' ಎಂದು ಫೇಸ್‌ಬುಕ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದಾರೆ.
ಭಾರತದ ಜನಸಂಖ್ಯೆ 139 ಕೋಟಿ. ಈ ಪೈಕಿ 106 ಕೋಟಿ ಜನರು ವಯಸ್ಕರು. ಈ ಪೈಕಿ 29 ಕೋಟಿ ಜನರು ಡಬಲ್ ಡೋಸ್ ಪಡೆದಿದ್ದಾರೆ. ಒಟ್ಟು ಸಾಧನೆ ಪ್ರಮಾಣ ಶೇ 21ರಷ್ಟು ಮಾತ್ರ ಎಂದು ಹೇಳಿದ್ದಾರೆ.