ಚೆನ್ನೈ: ಅಕ್ಟೋಬರ್ 17 ಮತ್ತು 18 ರಂದು ತಮಿಳುನಾಡಿನಿಂದ ಕೇರಳಕ್ಕೆ ಮತ್ತು ಕೇರಳದಿಂದ ತಮಿಳುನಾಡಿಗೆ ಪ್ರಯಾಣಿಸುವ ಕನಿಷ್ಠ ನಾಲ್ಕು ರೈಲುಗಳು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಭಾನುವಾರ ದಕ್ಷಿಣ ರೈಲ್ವೆ ತಿಳಿಸಿದೆ.
"17.10.2021 ರಂದು ಚೆನ್ನೈ ಎಗ್ಮೋರ್ ನಿಂದ ಹೊರಡುವ ವಿಶೇಷ ರೈಲು ಸಂಖ್ಯೆ 06101 ಚೆನ್ನೈ ಎಗ್ಮೋರ್ - ಕೊಲ್ಲಂ ರೈಲನ್ನು ಸೆಂಗೊಟ್ಟೈ ಮತ್ತು ಕೊಲ್ಲಂ ನಡುವೆ ರದ್ದುಗೊಳಿಸಲಾಗಿದೆ.
17.10.2021 ರಂದು ಹೊರಡುವ ರೈಲು ಸಂಖ್ಯೆ 06792 ಪಾಲಕ್ಕಾಡ್ - ತಿರುನೆಲ್ವೇಲಿ ವಿಶೇಷ ರೈಲು ಪ್ರಯಾಣಯನ್ನು ಪುನಲೂರು ಮತ್ತು ತಿರುನೆಲ್ವೇಲಿ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
17.10.2021 ರಂದು ಹೊರಡುವ ರೈಲು ಸಂಖ್ಯೆ 06791 ತಿರುನೆಲ್ವೇಲಿ - ಪಾಲಕ್ಕಾಡ್ ವಿಶೇಷ ರೈಲನ್ನು ತಿರುನೆಲ್ವೇಲಿ ಮತ್ತು ಪುನಲೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
18.10.2021 ರಂದು ಹೊರಡುವ ರೈಲು ಸಂಖ್ಯೆ 06102 ಕೊಲ್ಲಂ - ಚೆನ್ನೈ ಎಗ್ಮೋರ್ ವಿಶೇಷ ರೈಲು ಪ್ರಯಾಣವನ್ನು ಸೆಂಗೊಟ್ಟೈ ಮತ್ತು ಕೊಲ್ಲಂ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಪರಿಣಾಮ ಹಲವು ಭೂಕುಸಿತಗಳ ಸಂಭವಿಸಿವೆ. ಕೇರಳದಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ 21 ಕ್ಕೆ ಏರಿದೆ.