HEALTH TIPS

ಜಾಗತಿಕವಾಗಿ ಇನ್ನೊಂದು ಅಲೆ?; ಚೀನಾ, ರಷ್ಯಾ, ನ್ಯೂಜಿಲೆಂಡ್​ನಲ್ಲಿ ಕೇಸ್ ಹೆಚ್ಚಳ; ಕೊವ್ಯಾಕ್ಸಿನ್ ಅನುಮೋದನೆಗೆ ಕ್ಷಣಗಣನೆ

              ನವದೆಹಲಿ: ಸುಮಾರು ಎರಡು ವರ್ಷಗಳ ಹಿಂದೆ ಆರಂಭವಾದ ಕೋವಿಡ್-19 ಸಾಂಕ್ರಾಮಿಕತೆ ಕಾಟ ಈಗ ಇನ್ನೊಂದು ಸುತ್ತು ಕಾಡುವ ಭೀತಿ ಆವರಿಸಿದೆ. ಚೀನಾ, ರಷ್ಯಾ, ನ್ಯೂಜಿಲೆಂಡ್, ಬೆಲ್ಜಿಯಂ ಮೊದಲಾದ ದೇಶಗಳಲ್ಲಿ ಕರೊನಾ ಸಾಂಕ್ರಾಮಿಕತೆ ಆಸ್ಪೋಟಿಸಿದ್ದು ಇನ್ನೊಂದು ಭೀಕರ ಅಲೆ ಜಗತ್ತನ್ನು ಅಪ್ಪಳಿಸಲಿದೆಯೇ ಎಂಬ ಆತಂಕ ಹೆಚ್ಚಿಸಿದೆ.

             ರಷ್ಯಾದಲ್ಲಿ ಮಂಗಳವಾರ ಒಂದೇ ದಿನ 1,106 ಜನರು ಸೋಂಕಿಗೆ ಬಲಿ ಯಾಗಿದ್ದು ಕಳವಳಕ್ಕೆ ಕಾರಣ ವಾಗಿದೆ. ರಷ್ಯಾದಲ್ಲಿ ಕೇಸ್ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇರುವುದ ರಿಂದ ಅನೇಕ ಸ್ಥಳಗಳಲ್ಲಿ ಮತ್ತೆ ಭಾಗಶಃ ಲಾಕ್​ಡೌನ್ ಘೋಷಿಸಲಾಗಿದೆ. ದೇಶದಲ್ಲಿ ಮಂಗಳವಾರ 36,446 ಪ್ರಕರಣಗಳು ದೃಢಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಧಾನಗತಿಯ ಲಸಿಕೆ ಅಭಿಯಾನ ಸೋಂಕು ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗಿದೆ.

           ಚೀನದಲ್ಲಿ ಲಾಕ್​ಡೌನ್: ಚೀನಾದಲ್ಲಿ ಸೋಂಕಿನ ಪ್ರಕರಣ ಹೆಚ್ಚುತ್ತಿರುವುದರಿಂದ ಸುಮಾರು 40 ಲಕ್ಷ ಜನಸಂಖ್ಯೆಯ ಲಾಂರೆkೌ ನಗರದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಿಸಲಾಗಿದೆ. ತುರ್ತು ಸಂದರ್ಭದ ಹೊರತಾಗಿ ಮನೆಗಳಿಂದ ಹೊರಹೋಗದಂತೆ ನಗರದ ನಿವಾಸಿಗಳಿಗೆ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ. ಮಂಗಳವಾರ ಅಲ್ಲಿ ಆರು ಹೊಸ ಪ್ರಕರಣಗಳು ಹಾಗೂ ದೇಶದಾದ್ಯಂತ 29 ಕೇಸ್​ಗಳು ಪತ್ತೆಯಾಗಿದ್ದು ಸೋಂಕನ್ನು ಕಟ್ಟಿ ಹಾಕಲು ಸರ್ಕಾರ ತ್ವರಿತ ಕ್ರಮಗಳಿಗೆ ಮುಂದಾಗಿದೆ. ಡೆಲ್ಟಾ ರೂಪಾಂತರಿ ಚೀನಾದಲ್ಲಿ ಸೋಂಕು ಆಸ್ಪೋಟಕ್ಕೆ ಕಾರಣವಾಗಿದೆ.

                ಡಬ್ಲ್ಯುಎಚ್​ಒ ಸಭೆ ಶೀಘ್ರ ನಿರ್ಧಾರ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್​ನ ಮೇಡ್ ಇನ್ ಇಂಡಿಯಾ ಲಸಿಕೆ ಕೊವ್ಯಾಕ್ಸಿನ್ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್​ಒ) ಅನುಮೋದನೆಗೆ ಕ್ಷಣಗಣನೆ ಆರಂಭವಾಗಿದೆ. ಡಬ್ಲ್ಯುಎಚ್​ಒದ ತಾಂತ್ರಿಕ ಸಲಹಾ ಗುಂಪು ಸಭೆ ನಡೆಸುತ್ತಿದ್ದು ಯಾವುದೇ ಕ್ಷಣದಲ್ಲಾದರೂ ಕೊವ್ಯಾಕ್ಸಿನ್​ಗೆ ಹಸಿರು ನಿಶಾನೆ ತೋರುವ ನಿರೀಕ್ಷೆಯಿದೆ. ಭಾರತದಲ್ಲಿ ಬಳಸುತ್ತಿರುವ ಲಸಿಕೆಗಳಲ್ಲಿ ಕೊವ್ಯಾಕ್ಸಿನ್ ಕೂಡ ಒಂದಾಗಿದ್ದು ಜಾಗತಿಕ ಆರೋಗ್ಯ ವೇದಿಕೆಯ ಅಧಿಕೃತ ಮುದ್ರೆಗೆ ದೀರ್ಘ ಕಾಲದಿಂದ ಕಾಯುತ್ತಿದೆ. ಲಸಿಕೆಗೆ ಸಂಬಂಧಿಸಿದ ಎಲ್ಲ ಅಂಶಗಳು ತೃಪ್ತಿದಾಯಕವಾಗಿದ್ದರೆ ಈ ಸಭೆಯಲ್ಲೇ ಕೊವ್ಯಾಕ್ಸಿನ್​ಗೆ ಅನುಮೋದನೆ ಸಿಗಲಿದೆ ಎಂದು ಡಬ್ಲ್ಯುಎಚ್​ಒ ಅಧಿಕಾರಿ ಮಾರ್ಗರೆಟ್ ಹ್ಯಾರಿಸ್ ತಿಳಿಸಿದ್ದಾರೆ.

          ಕನಿಷ್ಠ ದೈನಿಕ ಕೇಸ್: ಭಾರತದಲ್ಲಿ ಮಂಗಳವಾರ ಬೆಳಗ್ಗೆವರೆಗಿನ 24 ತಾನಸಿನಲ್ಲಿ 12,428 ಹೊಸ ಪ್ರಕರಣಗಳು ದಾಖಲಾಗಿವೆ. ಸುಮಾರು 8 ತಿಂಗಳ ನಂತರ ದೈನಿಕ ಪ್ರಕರಣ ಇಳಿಮುಖವಾಗಿದೆ. ಆದರೆ, ಇದರಲ್ಲಿ ಕೇರಳದ ಪಾಲೇ 6,664 ಇರುವುದು. ರಾಜ್ಯದ ಮಟ್ಟಿಗೆ ಆತಂಕಕಾರಿ ಆಗಿದೆ.

           ಬೆಲ್ಜಿಯಂನಲ್ಲಿ ಸೋಂಕು ತೀವ್ರ: ಕರೊನಾ ಸೋಂಕಿನ ಪ್ರಕರಣಗಳು ಬೆಲ್ಜಿಯಂನಲ್ಲಿ ಮತ್ತೆ ಏರುಮುಖವಾಗಿದ್ದು ಕೆಲ ವಾರಗಳ ಹಿಂದಷ್ಟೇ ಸಡಿಲಿಸಲಾಗಿದ್ದ ನಿರ್ಬಂಧಗಳನ್ನು ಪುನಃ ಹೇರಲು ಸರ್ಕಾರ ಮಂಗಳವಾರ ನಿರ್ಧರಿಸಿದೆ. 1.10 ಕೋಟಿ ಜನಸಂಖ್ಯೆಯ ದೇಶದಲ್ಲಿ ದೈನಿಕ ಪ್ರಕರಣಗಳು ಶೇಕಡ 75ರಷ್ಟು ಏರಿಕೆಯಾಗುತ್ತಿವೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಏರುತ್ತಿದೆ. ಪ್ರತಿ ದಿನ ಸರಾಸರಿ 13 ಜನರು ಬಲಿಯಾಗುತ್ತಿದ್ದಾರೆ.

             ವಿದೇಶಿ ಪ್ರಯಾಣಿಕರ ಪ್ರವೇಶ ನಿರ್ಬಂಧ ತೆಗೆದ ಅಮೆರಿಕ: ಕೋವಿಡ್-19 ಸಾಂಕ್ರಾಮಿಕದ ಕಾರಣ ಭಾರತ ಸೇರಿದಂತೆ 50 ರಾಷ್ಟ್ರಗಳ ಪ್ರಯಾಣಿಕರು ತನ್ನ ದೇಶ ಪ್ರವೇಶಿಸಿದಂತೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ಸೋಮವಾರ ತೆರವುಗೊಳಿಸಿದೆ. ಇದು ನವೆಂಬರ್ 8ರಿಂದ ಜಾರಿಗೆ ಬರಲಿದೆ ಎಂದು ಶ್ವೇತಭವನ ಹೇಳಿದೆ. ಎಲ್ಲಾ ದೇಶಗಳಲ್ಲೂ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿರುವುದರಿಂದ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಅನುಕೂಲ ಮಾಡಿಕೊಡಲು ಸಾಂಕ್ರಮಿಕ ತಡೆಯಲು ವಿಧಿಸಲಾಗಿದ್ದ ಆದೇಶಕ್ಕೆ ಅಧ್ಯಕ್ಷ ಜೋ ಬೈಡನ್ ಸಹಿ ಮಾಡಿದ್ದಾರೆ. ವಿದೇಶ ಪ್ರಯಾಣಿಕರಿಗೆ ಅಗತ್ಯವಾದ ಹೆಚ್ಚುವರಿ ಲಸಿಕೆಯ ಬೇಡಿಕೆಯ ಆದೇಶಕ್ಕೂ ಒಪ್ಪಿಗೆ ನೀಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

             2 ಡೋಸ್ ಪಡೆಯದವರು 11 ಕೋಟಿ: ಲಸಿಕೆ ಅಭಿಯಾನವನ್ನು ತ್ವರಿತಗೊಳಿಸುವ ಉದ್ದೇಶದಿಂದ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಎಲ್ಲ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಬುಧವಾರ ಸಭೆ ನಡೆಸಲಿದ್ದಾರೆ. ದೇಶದಲ್ಲಿ ಮೊದಲ ಡೋಸ್ ಲಸಿಕೆ ಪಡೆದವರ ಪೈಕಿ ಸುಮಾರು 11 ಕೋಟಿ ಜನರು ಎರಡನೇ ಡೋಸ್ ಪಡೆದಿಲ್ಲ. ಇದೊಂದು ಕಳವಳದ ವಿಚಾರವಾಗಿದ್ದು, ಪ್ರಮುಖವಾಗಿ ಈ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಂಭವವಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries