HEALTH TIPS

ಮಾಡತ್ತಡ್ಕ ಶ್ರೀ ಹರಿಹರ ಮಂದಿರ ಪರಿಸರದಲ್ಲಿ " ಗೋವಿಗಾಗಿ ಮೇವು ಮೇವಿಗಾಗಿ ನಾವು - ಸೇವಾಅಘ್ರ್ಯ " ಸಂಪನ್ನ

   

                 ಮುಳ್ಳೇರಿಯ: ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಕಾಮದುಘಾ ಯೋಜನೆಯನ್ವಯ ಕಾರ್ಯಾಚರಿಸುವ ಬಜಕೂಡ್ಲುವಿನ ಅಮೃತಧಾರಾ ಗೋಶಾಲೆ, ಗೋಲೋಕದ ಗೋವುಗಳ ಮೇವಿಗಾಗಿ ಹಸಿ ಹುಲ್ಲು ಸಂಗ್ರಹಿಸುವ ಶ್ರಮದಾನ ಮಾಡತಡ್ಕ  ಶ್ರೀ ಹರಿ-ಹರ ಭಜನಾ ಮಂದಿರದ ವಠಾರದಲ್ಲಿ ಜರಗಿತು.

             ಭಜನಾ ಮಂದಿರದ ಸ್ಥಳದಲ್ಲಿ ಬೆಳೆದಿರುವ ಹುಲ್ಲುಗಳನ್ನು ಸ್ವಚ್ಛಗೊಳಿಸಿ ಶ್ರೀ ಅಮೃತಾದಾರ  ಗೋಶಾಲೆ ಬಜಕೂಡ್ಲುಗೆ ತಲುಪಿಸುವ ಕಾರ್ಯವು ಯಶಸ್ವಿಯಾಗಿ ಜರಗಿತು. ಮಾಡತ್ತಡ್ಕ ದೈವಗಳ ಸೇವಾ ಸಮಿತಿ ಹಾಗೂ ಶ್ರೀ ಹರಿ-ಹರ ಭಜನಾ ಮಂದಿರ ಮಾಡತಡ್ಕ ಇವರ ಸಹಯೋಗದಲ್ಲಿ ಕಾರ್ಯಕ್ರಮ ಜರಗಿತು

                      ಮಿಂಚಿನಡ್ಕ ಗೋವಿಂದ ಭಟ್, ಸುಬ್ರಹ್ಮಣ್ಯ ಭಟ್, ರಮೇಶ್ ಕೇರ, ಮಹೇಶ್ ಸರಳಿ, ಅರುಣ್ ಕುಮಾರ್, ಪ್ರವೀಣ್ ಕುಮಾರ್, ನಯನ್ ಕುಮಾರ್, ನಳಿನಾಕ್ಷನ್ ದೇವರಮೆಟ್ಟು ಮೊದಲಾದವರ ನೇತೃತ್ವದಲ್ಲಿ  20ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದರು.  

                ಕೋವಿಡ್ ಮಾನದಂಡಕ್ಕೆ ಅನುಸಾರವಾಗಿ ನಿಯಮಪಾಲನೆಯೊಂದಿಗೆ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries