ಮಂಜೇಶ್ವರ: ಕರಿಬೈಲು ಶ್ರೀ ಮಹಾಮಲರಾಯ ದೈವಸ್ಥಾನದ ನವರಾತ್ರಿ ಪೂಜೆಯು ಊರ ಹತ್ತು ಸಮಸ್ತರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಎಂ. ವಾಸುದೇವ ಮಯ್ಯರ ಪೌರೋಹಿತ್ಯದಲ್ಲಿ ಮಂಗಳವಾರ ರಾತ್ರಿ ನಡೆಯಿತು. ಈ ವೇಳೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಹವ್ಯಾಸಿ ಯಕ್ಷಗಾನ ಕಲಾವಿದ, ಸಂಘಟಕ ನ್ಯಾಯವಾದಿ ಯಂ. ದಾಮೋದರ ಶೆಟ್ಟಿ ಸೊಯಿಪಕಲ್ಲು ಇವರ ಸೇವಾ ರೂಪದಲ್ಲಿ ಪ್ರಸಿದ್ಧ ನುರಿತ ಕಲಾವಿದರಿಂದ "ಶಾಂಭವಿ ವಿಜಯ" ಕಥಾ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಭಾಗವತರಾಗಿ ಬೊಂದೆಲ್ ಸತೀಶ್ ಶೆಟ್ಟಿ, ಹಿಮ್ಮೇಳದಲ್ಲಿ ರೋಹಿತ್ ಉಚ್ಚಿಲ್, ಕೋಳ್ಯೂರ್ ಭಾಸ್ಕರ, ಜಿತೇಶ್ ಕೋಳ್ಯೂರು, ಮುಮ್ಮೇಳದಲ್ಲಿ ಸಾಣೂರು ಮಹೇಶ್ ಕುಮಾರ್, ನ್ಯಾ.ಎಂ. ದಾಮೋದರ ಶೆಟ್ಟಿ, ಗಣೇಶ್ ಕುಂಜತ್ತೂರು, ದಿನೇಶ್ ಶೆಟ್ಟಿ ಕಾವಳಕಟ್ಟೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ದೇವಿಪ್ರಸಾದ್ ಶೆಟ್ಟಿ ಬೆಜ್ಜ ಮೊದಲಾದವರು ಸಹಕರಿಸಿದರು. ಬಳಿಕ ಸಂಘಟಕ, ಯಕ್ಷಸಾಧಕ, ಮಂಜೇಶ್ವರ ಜಯ - ವಿಜಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಸತತ ಎರಡು ಬಾರಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಅಯ್ಕೆಯಾದ ನ್ಯಾಯವಾದಿ ಎಂ. ದಾಮೋದರ ಶೆಟ್ಟಿಯವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕ್ಷೇತ್ರದ ಸಮಿತಿ ಪಧಾಧಿಕಾರಿಗಳಾದ ರಾಂ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ರವೀಂದ್ರ ಶೆಟ್ಟಿ ಕರಿಬೈಲ್, ಆನಂದ ಆಳ್ವ ಮಾಟೆ, ವಿಶ್ವನಾಥ ಆಳ್ವ ಕರಿಬೈಲು, ಅಣ್ಣಪ್ಪ ಹೆಗ್ಡೆ ಮಾಟೆ, ಗೋಪಾಲಕೃಷ್ಣ ಆಳ್ವ ಕೊಡ್ಡೆ, ವಿಶ್ವನಾಥ ರೈ ಕುದುರು, ಚಂದ್ರಹಾಸ ಆಳ್ವ ಕೊಡ್ಡೆ, ಪ್ರಭಾಕರ ಶೆಟ್ಟಿ ಮಂಜಯ್ಯಹಿತ್ತಿಲು, ಕೃಷ್ಣ ಶೆಟ್ಟಿ ಕೆಳಗಿನ ಹೊಸಮನೆ, ಮಿಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು ಮೊದಲಾದವರು ಶಾಲು ಹೊದಿಸಿ, ಸ್ಮರಣಿಕೆ, ಫಲಫುಷ್ಪವನ್ನಿತ್ತು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ದಾಮೋದರ ಶೆಟ್ಟಿಯವರು ನನಗೆ ಸಿಕ್ಕ ಈ ಸನ್ಮಾನ ಶ್ರೀ ವಾರಹಿ ತಾಯಿಯ ವರ ಪ್ರಸಾದ ಎಂದು ಹೇಳಿ ಕಿರ್ತಿಶೇಷರಾದ ಬಾಯಾರು ಜತ್ತು ಶೆಟ್ಟಿ, ಕುದುರು ಚಿಕ್ಕಪ್ಪು ಭಂಡಾರಿ, ಮಾಟೆ ಮಂಜಯಹಿತ್ಲು ಮಂಜಪ್ಪ ಶೆಟ್ಟಿಯವರನ್ನು ನೆನಪಿಸಿಕೊಂಡರು.
ವಿಜಯಕುಮಾರ್ ಶೆಟ್ಟಿ ಗಾಣದಮೂಲೆ,ಉದಯಕುಮಾರ್ ಶೆಟ್ಟಿ ಕರಿಬೈಲು, ಕಾರ್ತಿಕ್ ಶೆಟ್ಟಿ ಮಜಿಬೈಲು, ಪ್ರದಿಪ್ ಶೆಟ್ಟಿ ಬಲ್ಲಂಗುಡೇಲು,ಪ್ರವೀಣ್ ಶೆಟ್ಟಿ ಬಲ್ಲಂಗುಡೇಲು, ರಾಜರಾಮ ಅಳ್ವ ಕರಿಬೈಲು, ಪ್ರದಿಪ್ ಶೆಟ್ಟಿ ಕರಿಬೈಲು,ಸುದಕಾರ ಕುಂಬೆಹಿತ್ಲು, ಸತೀಶ್ ಶೆಟ್ಟಿ ಕರಿಬೈಲು, ಪ್ರಸನ್ನ ಶೆಟ್ಟಿ ಕರಿಬೈಲು,ಚಂದ್ರಹಾಸ ಅಳ್ವ ಉಳಿಯ,ಶ್ರೀಧರ ಶೆಟ್ಟಿ ಹೊಸಮನೆ,ಕಿರಣ್ ಅಳ್ವ ಪಟ್ಟತ್ತಮೊಗರು, ಅರುಣ್ ಶೆಟ್ಟಿ ಮಂಜಯಹಿತ್ಲು, ನಿಶಾಂತ್ ಅಳ್ವ ಕೊಡ್ಡೆ,ಸಂದಿಪ್ ಶೆಟ್ಟಿ ಕೊಡ್ಡೆ,ತನಿಷ್ ಶೆಟ್ಟಿ ಕರಿಬೈಲು ಹಾಗು ಕರಿಬೈಲು ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕ್ಷೇತ್ರದ ಕಾರ್ಯದರ್ಶಿ ಮಾಟೆ ಅಣ್ಣಪ್ಪ ಹೆಗ್ಡೆ ಸ್ವಾಗತಿಸಿ, ವಂದಿಸಿದರು.