ಕಾಸರಗೋಡು: ನೈಸರ್ಗಿಕ, ಶುದ್ಧ, ತಾಜಾ ಜೇನುತುಪ್ಪ ಪಡೆಯುವ ಆಗ್ರಹ ನಿಮಗಿದೆಯೇ ? ಬನ್ನಿ, ಕಾಡು ಹಾದಿ ಹಿಡಿದು ಕಮ್ಮಾಡಿ ಎಂಬ ಹೆಸರಿನ ಗ್ರಾಮಕ್ಕೆ ಬಂದರೆ ನಿಮಗೆ ಬೇರೆಲ್ಲೂ ಸಿಗದಂಥಾ ಮದವೂರು, ಕಾಡುಜೇನು ಎಂಬ ಹೆಸರುಗಳ ಜೇನುತುಪ್ಪ ಸಿಗಲಿದೆ.
ಕುಟುಂಬಶ್ರೀ ಜಿಲ್ಲಾ ಮಿಷನ್ ಪರಿಶಿಷ್ಟ ಪಂಗಡ ಸುಸ್ಥಿರ ಅಭಿವೃದ್ಧಿ ಯೋಜನೆಯ ಅಂಗವಾಗಿ ಪರಿಶಿಷ್ಟ ಪಂಗಡ ವಲಯದ ಜನತೆಗೆ ಸ್ವಾವಲಂಬಿ ಬದುಕು ನಡೆಸಲು ಬೆಂಬಲ ನೀಡುವ ಉದ್ದೇಶದಿಂದ ಕಾಸರಗೋಡು ಜಿಲ್ಲೆಯದೇ ಸ್ವಂತಿಕೆ ಹೊಂದಿರುವ ಕಾರ್ಯಕ್ರಮವೇ "ಜೇನುಗ್ರಾಮ".
ಪರಪ್ಪ ಸಮೀಪದ ಕಮ್ಮಾಡಿ ಎಂಬ ಪ್ರದೇಶದ ಜೇನುಗ್ರಾಮದಲ್ಲಿ 2022 ಮಾರ್ಚ್ ತಿಂಗಳ ಅವಧಿಗೆ 100 ಕಿಲೋ ಜೇನುತುಪ್ಪ ಉತ್ಪಾದಿಸುವ ಉದ್ದೇಶದಿಂದ (ಗುರಿಯಿರಿಸಿ) ಇಲ್ಲಿ ಚಟುವಟಿಕೆ ನಡೆಸಲಾಗುತ್ತಿದೆ. ಪರಿಶಿಷ್ಟ ಪಂಗಡ ವಲಯದಲ್ಲಿ ಪರಂಪರಾಗತ ರೀತಿಯಲ್ಲಿ ಅರಣ್ಯ ಪ್ರದೇಶಗಳಿಂದ ಸಂಗ್ರಹಿಸಲಾಗುವ ಜೇನು ಸಂಗ್ರಹಿಸುವ ಪರಿಶಿಷ್ಟ ಪಂಗಡಗಳಿಗೇ ಸೇರಿದ ಕುಡಿಯ ಜನಾಂಗದ ಮಂದಿ ಇಲ್ಲಿದ್ದಾರೆ. ಇವರ ಬದುಕನ್ನು ಸುಧಾರಿತಗೊಳಿಸುವ ನಿಟ್ಟಿನಲ್ಲಿ ಮತ್ತು ಇವರ ಕುಲಕಸುಬನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ
ಅತ್ಯಾಧುನಿಕ ರೀತಿ ಜೇನು ಕೃಷಿ ನಡೆಸಲು ಮತ್ತು ಅವರಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡಿ ಕಳೆದ ಜನವರಿ ತಿಂಗಳಲ್ಲಿ ಕುಟುಂಬಶ್ರೀಯ ನೇತೃತ್ವದಲ್ಲಿ ಈ ಯೋಜನೆ ಆರಂಭಿಸಲಾಗಿದೆ.
ಮೊದಲ ಹಂತದಲ್ಲಿ 12 ಮಂದಿ ಮಹಿಳೆಯರಿಗೆ ಅಳವಡಿಸಿ ಯೋಜನೆಯ ಚಟುವಟಿಕೆ ಆರಂಭಿಸಲಾಗಿತ್ತು. ಜ್ವಾಲಾ ಹನಿ ಯೂನಿಟ್, ಸ್ನೇಹಾ ಜನಿ ಯೂನಿಟ್ ಎಂಬ ಹೆಸರುಗಳಲ್ಲಿ ತಲಾ 5 ಮಂದಿಯ 2 ಗುಂಪುಗಳು ಈ ಯೋಜನೆಯನ್ನು ನಡೆಸಿಕೊಂಡುಬಂದಿದ್ದಾರೆ. ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃಥ್ವದಲ್ಲಿ ಜೇನುನೊಣ ಸಾಕಣೆ ತರಬೇತಿ 2021-22 ಆರ್ಥಿಕ ವರ್ಷದ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಪರಿಶಿಷ್ಟ ಪಂಗಡ ಪ್ರತ್ಯೇಕ ಬದುಕಿನಮಾರ್ಗ ನಿಧಿ, ಫಾರಂ ಲೈವ್ಲೀಫುಡ್ ಯೋಜನೆಯ ನಿಧಿ ಈ ಉದ್ದಿಮೆದಾರರಿಗೆ ಒದಗಿಸಲಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಮೊದಲ ಕೊಯ್ಲಿನಲ್ಲಿ "ಕಮ್ಮಾಡಿ ಕಾಡುಜೇನು" ಎಂಬ ಬ್ರಾಂಡ್ ಮೂಲಕ ಮಾರುಕಟ್ಟೆಗೆ ತಲಪಿದ್ದ ಈ ಉತ್ಪನ್ನಕ್ಕೆ ಭಾರೀ ಸ್ವೀಕಾರ ಲಭಿಸಿತ್ತು. ಮೊದಲ ಕೊಯ್ಲಿನಲ್ಲಿ 35 ಕಿಲೋ ಜೇನುತುಪ್ಪ ಲಭಿಸಿತ್ತು. ಈ ಬಾರಿಯ ಮಾರ್ಚ್ ತಿಂಗಳ ವೇಳೆಗೆ 100 ಕಿಲೋ ಕೊಯ್ಲು ಪಡೆಯುವ ಉದ್ದೇಶವನ್ನು ಕುಟುಂಬಶ್ರೀ ಇರಿಸಿಕೊಂಡಿದೆ.
ಮೊದಲ ಹಂತದ ಕೊಯ್ಲಿನ ನಂತರ ಜೇನುನೊಣಗಳ ಪೆಟ್ಟಿಗೆ ಡಿವಿಝನ್ ನಡೆಯುವ ಪ್ರಕ್ರಿಯೆಯ ಎರಡನೇ ಹಂತದ ವೈಕ್ಞಾನಿಕ ತರಬೇತಿ ಕಮ್ಮಾಡಿ ಊರಿನಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಪ್ರಕಾಶನ್ ಪಾಲಾಯಿ, ಪರಪ್ಪ ಬ್ಲೋಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತುಮೂಲ, ಕುಟುಂಬಶ್ರೀ ಟ್ರೈಬಲ್ ಪೆÇ್ರೀಗ್ರಾಂ ಮೆನೆಜರ್ ಪಿ.ರತ್ನೇಶ್, ಸಂಚಾಲಕ ಎಂ.ಮನೀಷ್, ಆನಿಮೇಟರ್ ಲಕ್ಷ್ಮಿ, ಸಿ.ಡಿ.ಎಸ್. ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.