ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀರ್ಚಾಲಿನ ರುದ್ರ ಫ್ರೆಂಡ್ಸ್ ಕ್ಲಬ್ ಸದಸ್ಯರು ಗಾಂಧಿ ಜಯಂತಿಯ ಅಂಗವಾಗಿ ನೀರ್ಚಾಲು ಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿದರು.
ಸತತ ನಾಲ್ಕನೇ ವರ್ಷ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕ್ಲಬ್‍ನ ಮೂವತ್ತರಷ್ಟು ಸದಸ್ಯರು ಭಾಗವಹಿಸಿದ್ದರು. ಕ್ಲಬ್ ಅಧ್ಯಕ್ಷ ರಂಜಿತ್ ನೀರ್ಚಾಲು ಅವರು ನೇತೃತ್ವ ವಹಿಸಿದ್ದರು.