ಕೊಚ್ಚಿ: ಭಾರತದಲ್ಲೇ ಮೊದಲ ಬಾರಿಗೆ ಮೆಟ್ರೋ ರೈಲುಗಳಿಗೆ ನಾಮಕರಣ ನಡೆದಿದೆ. ಕೊಚ್ಚಿ ಮೆಟ್ರೋ ರೈಲುಗಳನ್ನು ಸಾಮಾನ್ಯ ರೈಲುಗಳ ರೀತಿಯಲ್ಲಿ ಹೆಸರಿರಿಸಲಾಗುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲುಗಳಿಗೆÀ ಹೆಸರನ್ನು ಇಡಲಾಗಿದೆ.
ಕೊಚ್ಚಿ ಮೆಟ್ರೋ ಅಡಿಯಲ್ಲಿ 25 ರೈಲುಗಳು ಸಂಚರಿಸುತ್ತಿವೆ. ಈ ಎಲ್ಲ ಹೆಸರುಗಳನ್ನು ಭಾರತೀಯ ಸಂಸ್ಕøತಿಗೆ ಅನುಗುಣವಾಗಿ ನೀಡಲಾಗಿದೆ ಎಂದು ಕೊಚ್ಚಿ ಮೆಟ್ರೋ ಫೇಸ್‍ಬುಕ್‍ನಲ್ಲಿ ಪ್ರಕಟಿಸಿದೆ. ಈ ರೈಲುಗೆ ಪ್ರಮುಖ ನದಿಗಳು ಮತ್ತು ಮಾರುತಗಳ ಹೆಸರಿಡಲಾಗಿದೆ. ರೈಲುಗಳ ಹೆಸರುಗಳು ಗಂಗಾ, ಯಮುನಾ, ಬ್ರಹ್ಮಪುತ್ರ, ಪಂಪ, ಪೆರಿಯಾರ್, ಭಾರತಪುಳ, ಶಿರಿಯಾ, ಮಾಹೆ, ಮಂದಾಕಿನಿ, ವೈಗಾ, ವಾಯು ಮತ್ತು ಮಾರುತ್ ಎಂದಿರಿಸಲಾಗಿದೆ.
ಕೊಚ್ಚಿ ಮೆಟ್ರೋ ಹೆಸರನ್ನು ಪಂಪಾ ಹೆಸರಿನ ಮೆಟ್ರೋ ರೈಲಿನ ಚಿತ್ರದೊಂದಿಗೆ ಫೇಸ್ ಬುಕ್ ನಲ್ಲಿ ಘೋಷಿಸಲಾಯಿತು. "ದೇಶದಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲುಗಳಿಗೆ ಹೆಸರಿಡಲಾಗಿದೆ ಮತ್ತು ಹೆಸರುಗಳು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿವೆ" ಎಂದು ಕೊಚ್ಚಿ ಮೆಟ್ರೋ ಫೇಸ್‍ಬುಕ್‍ನಲ್ಲಿ ಬರೆದಿದೆ.