ಸ್ಟಾಕ್ ಹೋಂ: 2021ನೇ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿಯು ಘೋಷಣೆಯಾಗಿದ್ದು, ಫಿಲಿಪೀನ್ಸ್ ನ ಪತ್ರಕರ್ತೆ ಮರಿಯಾ ರೆಸ್ಸಾ ಹಾಗೂ ರಶ್ಯಾದ ಪತ್ರಕರ್ತ ಡಿಮಿಟ್ರಿ ಮುರಾತೊವ್ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
"ಪ್ರಜಾಪ್ರಭುತ್ವ ಮತ್ತು ಶಾಶ್ವತ ಶಾಂರಿಗೆ ಪೂರ್ವಾಪೇಕ್ಷಿತವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಸುವ ಅವರ ಪ್ರಯತ್ನಗಳಿಗಾಗಿ" ಈ ಪ್ರಶಸ್ತಿ ನೀಡಲಾಗಿದೆ ಎಂದು ನೋಬೆಲ್ ಪ್ರಶಸ್ತಿಯ ಅಧಿಕೃತ ಸಾಮಾಜಿಕ ತಾಣ ಖಾತೆಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ವರ್ಷದ ಪ್ರಶಸ್ತಿಯು ವಿಶ್ವದಾದ್ಯಂತ ಹಸಿವು ಮತ್ತು ಆಹಾರ ಅಭದ್ರತೆಯನ್ನು ಎದುರಿಸಲು ಮಾಡಿದ ಪ್ರಯತ್ನಗಳಿಗಾಗಿ ʼವಿಶ್ವ ಆಹಾರ ಕಾರ್ಯಕ್ರಮʼದ ಪಾಲಿಗೆ ದಕ್ಕಿತ್ತು.