HEALTH TIPS

ಮೂರನೇ ವಿಶ್ವಯುದ್ಧಕ್ಕೆ ಏಲಿಯನ್​ಗಳ ತಯಾರಿ! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಯುಎಸ್​ ಮಾಜಿ ಸೇನಾಧಿಕಾರಿ

              ವಾಷಿಂಗ್ಟನ್​: ಏಲಿಯನ್​ ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟತೆ ದೊರೆತಿಲ್ಲ. ಏಲಿಯನ್​ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಆಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್​ಗಳ ಸಂಗತಿ​ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.

               ಇದೀಗ ಏಲಿಯನ್​​ಗಳ ಬಗ್ಗೆ ಯುಎಸ್​ನ ಮಾಜಿ ಮಿಲಿಟರಿ ಅಧಿಕಾರಿಯೊಬ್ಬರು ಶಾಕಿಂಗ್​ ಹೇಳಿಕೆಯೊಂದನ್ನು ನೀಡಿದ್ದಾರೆ. ಮೂರನೇ ವಿಶ್ವಯುದ್ಧ ಏಲಿಯನ್​ಗಳಿಂದಲೇ ಶುರುವಾಗಲಿದೆ ಎಂದಿದ್ದಾರೆ. ಯುಎಸ್​ ವಾಯುಪಡೆಯಲ್ಲಿ ಉನ್ನತ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿರುವ ರಾಬರ್ಟ್​ ಸಲಾಸ್​ ಅವರು ಈ ವಾದವನ್ನು ಮಂಡಿಸಿದ್ದಾರೆ.

              ಏಲಿಯನ್​ಗಳು ಪರಮಾಣು ಕ್ಷಿಪಣಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಇದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಅತಿ ಶೀಘ್ರದಲ್ಲೇ ಯುಎಸ್​ ವಾಯುಪಡೆಯ ನಾಲ್ವರು ಮಾಜಿ ಮುಖ್ಯಸ್ಥರು ಬಿಡುಗಡೆ ಮಾಡಲಿದ್ದಾರೆ ಎಂದು ರಾಬರ್ಟ್​ ಸಲಾಸ್​ ಹೇಳಿದ್ದಾರೆ. ಅಂದಹಾಗೆ ಸಲಾಸ್​ ಅವರು ಯುಎಸ್​ ವಾಯುಪಡೆಯ ಶಸ್ತ್ರಾಸ್ತ್ರ ನಿಯಂತ್ರಕರಾಗಿದ್ದರು. ಅಲ್ಲದೆ, ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮೇಲ್ವಿಚಾರಕರಾಗಿ, ಟೈಟಾನ್​-3 ಕಾರ್ಯಕ್ರಮದಲ್ಲಿ ವಾಯುಪಡೆಯ ಕ್ಷಿಪಣಿ ಚಾಲನಾ ಇಂಜಿನಿಯರ್​ ಆಗಿ ಸೇವೆ ಸಲ್ಲಿಸಿದ್ದಾರೆ. 1971 ರಿಂದ 1973 ರವರೆಗೆ ಸ್ಪೇಸ್ ಶಟಲ್ ಡಿಸೈನ್​ ಪ್ರಪೋಸಲ್​ ಕುರಿತು ಮಾರ್ಟಿನ್-ಮಾರಿಟಾ ಏರೋಸ್ಪೇಸ್ ಮತ್ತು ರಾಕ್‌ವೆಲ್ ಇಂಟರ್‌ನ್ಯಾಷನಲ್‌ಗೆ ಸಲಾಸ್ ವಿಶ್ವಾಸಾರ್ಹ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಸಲಾಸ್​ ಅವರ ಪ್ರಕಾರ ಬೇರೆ ಗ್ರಹದಲ್ಲಿರುವ ಏಲಿಯನ್​ಗಳು ಪರಮಾಣ ಗುರಿಗಳನ್ನು ತಮ್ಮ ಶಸ್ತ್ರಾಸ್ತ್ರ ವ್ಯವಸ್ಥೆಯ ಮೂಲಕ ತಿರುಚಿ, ಕ್ಷಿಪಣಿಗಳನ್ನು ಅಶಕ್ತಗೊಳಿಸುತ್ತಿವೆ. ಉಡಾವಣಾ ಅನುಕ್ರಮವನ್ನು ಪ್ರಾರಂಭಿಸುವ ಮೂಲಕ ಕ್ಷಿಪಣಿಗಳನ್ನು ಸಕ್ರಿಯಗೊಳಿಸಲು ಪ್ರಾರಂಭಿಸಿವೆ ಎಂದು ಸಾಲಾಸ್ ಬಹಿರಂಗಪಡಿಸಿದ್ದಾರೆ. ಒಟ್ಟು 10 ಅಂತಾರಾಷ್ಟ್ರೀಯ ಬ್ಯಾಲಿಸ್ಟಿಕ್ಸ್​ ಕ್ಷಿಪಣಿಗಳನ್ನು ಏಲಿಯನ್​ಗಳು ಅಶಕ್ತಗೊಳಿಸಿವೆ ಎಂದು ಹೇಳಿದ್ದಾರೆ.

           1967 ಮಾರ್ಚ್​ 24ರಂದು ಸ್ಥಾಪನೆಯಾದ ಮಾಲ್ಮ್‌ಸ್ಟ್ರೋಮ್ ವಾಯುನೆಲೆಯಲ್ಲಿ ಭೂಗತ ಉಡಾವಣಾ ನಿಯಂತ್ರಣ ಸೌಲಭ್ಯದ ಕಮಾಂಡರ್ ಆಗಿ ಸೇವೆ ಸಲ್ಲಿಸಿರುವ ಸಲಾಸ್​, ಕ್ಷಿಪಣಿಗಳನ್ನು ಏಲಿಯನ್​ಗಳು ನಿಯಂತ್ರಿಸುವ ಘಟನೆ 1967 ಮಾರ್ಚ್​ 16ರಂದು ಬೇರೆ ಲಾಂಚ್​ ಕಂಟ್ರೋಲ್​ ಫೆಸಿಲಿಟಿಯಲ್ಲಿ ಹಿಂದೊಮ್ಮೆ ನಡೆದಿತ್ತು ಎಂದಿದ್ದಾರೆ. ಹೀಗಾಗಿ ಈ ಬಗ್ಗೆ ಅಧ್ಯಯನ ನಡೆಸುವಂತೆ ಯುಎಸ್​ ಕಾಂಗ್ರೆಸ್​ ಮೇಲೆ ಒತ್ತಡ ಏರಲು ಪ್ರಯತ್ನಿಸುತ್ತಿದ್ದೇವೆ ಎಂದು ಸಲಾಸ್​ ಮಾಹಿತಿ ನೀಡಿದ್ದಾರೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries